ಬ್ರೆಸಿಲಿಯಾ: ಪ್ರಪಂಚದ ಕೊರೊನಾ ಪ್ರಕರಣಗಳ ಪೈಕಿ ಮೂರನೇ ಸ್ಥಾನದಲ್ಲಿದ್ದ ಬ್ರೆಜಿಲ್ ಇದೀಗ 1,13,63,389 ಸೋಂಕಿತರೊಂದಿಗೆ ಭಾರತವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಬ್ರೆಜಿಲ್ನಲ್ಲಿ ಕೋವಿಡ್ 2ನೇ ಅಲೆ ಬೀಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 85,663 ಸೋಂಕಿತರು ಪತ್ತೆಯಾಗಿದ್ದಾರೆ. ಮೊದಲಿನಿಂದಲೂ ಮೃತರ ಸಂಖ್ಯೆಯಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲೇ ಮುಂದುವರೆದಿದ್ದು, ಈವರೆಗೆ 2,75,000 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಕೊರೊನಾ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 2 ಲಕ್ಷಕ್ಕೆ ಏರಿಕೆ.. 2.82 ಕೋಟಿ ಮಂದಿಗೆ ಲಸಿಕೆ
ಭಾರತದಲ್ಲಿ ಇಲ್ಲಿಯವರೆಗೆ 1,13,33,728 ಕೇಸ್ಗಳು ಪತ್ತೆಯಾಗಿದ್ದು, ಇದೀಗ ವಿಶ್ವದ ಸೋಂಕಿತರ ಪೈಕಿ ಎರಡರಿಂದ ಮೂರನೇ ಸ್ಥಾನಕ್ಕೆ ಬಂದಿದೆ. ಇನ್ನು ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನ ಕಾಯ್ದಿರಿಸಿಕೊಂಡಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 2,99,93,423 ಇದ್ದು, ಮೃತರ ಸಂಖ್ಯೆ 5,45,544ಕ್ಕೆ ಹೆಚ್ಚಳವಾಗಿದೆ.
ಒಟ್ಟಾರೆ ಪ್ರಪಂಚದಾದ್ಯಂತ ಬರೋಬ್ಬರಿ 11,96,13,949 ಜನರಿಗೆ ಮಹಾಮಾರಿ ಕೊರೊನಾ ತಗುಲಿದ್ದು, 26,51,733 ಸೋಂಕಿತರು ಮೃತಪಟ್ಟಿದ್ದಾರೆ. 9,62,64,995 ಮಂದಿ ಗುಣಮುಖರಾಗಿದ್ದಾರೆ.