ರಿಯೋ ಡಿ ಜನೈರೊ(ಬ್ರೆಜಿಲ್):ಲ್ಯಾಟಿನ್ ಅಮೆರಿಕದ ಅತಿದೊಡ್ಡ ದೇಶವು ಕೊರೊನಾ ಸಾಂಕ್ರಾಮಿಕ ರೋಗದ ಜಾಗತಿಕ ಕೇಂದ್ರ ಬಿಂದುವಾಗಿದೆ. ಬ್ರೆಜಿಲ್ ದೇಶದಲ್ಲಿ ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಕೊರೊನಾ ವೈರಸ್ ಸೋಂಕು ತಡೆಯಲು ಸರ್ಕಾರ ಕ್ರಮ ಕೈಗೊಳ್ಳುತ್ತಿರುವ ಮಧ್ಯ ಕೊರೊನಾ ರುದ್ರ ತಾಂಡವಾಡುತ್ತಿದೆ. ಇತರ ರಾಷ್ಟ್ರಗಳಿಗಿಂತ ಬ್ರೆಜಿಲ್ನಲ್ಲಿ ನಿತ್ಯ ವೈರಸ್‌ನಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ಅನೇಕ ಕಟ್ಟು ನಿಟ್ಟಿನ ಕ್ರಮಗಳ ನಡುವೆಯೂ ಕೊರೊನಾ ಉಲ್ಭಣವಾಗುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ರಾಷ್ಟ್ರದಲ್ಲಿ ಮಂಗಳವಾರ ದಾಖಲೆಯ ಸಾವು ಕಂಡಿದೆ. ಬರೋಬ್ಬರಿ 3,251 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಬ್ರೆಜಿಲ್‌ನ ಹೆಚ್ಚು ಜನಸಂಖ್ಯೆ ಹೊಂದಿರುವ ಸಾವೊ ಪಾಲೊ ನಗರವೊಂದರಲ್ಲೇ 1,021 ಜನ ಕೋವಿಡ್ನಿಂದ ಮೃತಪಟ್ಟಿದ್ದಾರೆ.