ರಿಯೊ ಡಿ ಜನೈರೊ, ಬ್ರೆಜಿಲ್ :ಲ್ಯಾಟಿನ್ ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ವೈರಸ್ನ ಹೊಸ ರೂಪಾಂತರಿಯಾದ ಒಮಿಕ್ರೋನ್ ಕಾಣಿಸಿಕೊಂಡಿದೆ. ಉತ್ತರ ಅಮೆರಿಕದ ರಾಷ್ಟ್ರಗಳಲ್ಲೂ ಆತಂಕ ಹೆಚ್ಚಾಗಲು ಕಾರಣವಾಗಿದೆ.
ಬ್ರೆಜಿಲಿಯನ್ ಹೆಲ್ತ್ ರೆಗ್ಯುಲೇಟರಿ ಏಜೆನ್ಸಿಯ ಪ್ರಕಾರ, ದಂಪತಿಯಲ್ಲಿ ಒಮಿಕ್ರೋನ್ ವೈರಸ್ ಕಾಣಿಸಿಕೊಂಡಿದೆ. ಸೋಂಕಿಗೆ ಒಳಗಾದ ವ್ಯಕ್ತಿ ನವೆಂಬರ್ 23ರಂದು ದಕ್ಷಿಣ ಆಫ್ರಿಕಾದಿಂದ ಬ್ರೆಜಿಲ್ನ ಸಾವೊ ಪಾಲೊ ನಗರಕ್ಕೆ ಆಗಮಿಸಿದ್ದ ಎಂದು ತಿಳಿದು ಬಂದಿದೆ. ಆ ವ್ಯಕ್ತಿಯ ಪತ್ನಿ ಎಲ್ಲಿಗೂ ಪ್ರಯಾಣ ಮಾಡಿರಲಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನವೆಂಬರ್ 9ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಓಮಿಕ್ರಾನ್ ವೈರಸ್ ಪತ್ತೆಯಾಗಿತ್ತು. ಇದಾದ ನಂತರ ಬ್ರೆಜಿಲಿಯನ್ ಸರ್ಕಾರವು ದಕ್ಷಿಣ ಆಫ್ರಿಕಾದಿಂದ ವಿಮಾನಗಳನ್ನು ತಾತ್ಕಾಲಿಕವಾಗಿ ನಿಷೇಧ ಮಾಡಿತ್ತು.