ನ್ಯೂಯಾರ್ಕ್: 737 ಮ್ಯಾಕ್ಸ್ ( 737 MAX) ವಿಮಾನವು ಇಥಿಯೋಪಿಯನ್ ಏರ್ಲೈನ್ ಆದಿಸ್ ಅಬಾಬಾದಲ್ಲಿ ಪತನಗೊಂಡು ಸುಮಾರು 157 ಜನರನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಘಟನೆಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಬೋಯಿಂಗ್, ಸಂತ್ರಸ್ತರ ಕುಟುಂಬಗಳೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ.
ಮಾರ್ಚ್ 2019 ರಲ್ಲಿ ಬೋಯಿಂಗ್ನ 737 ಮ್ಯಾಕ್ಸ್ ( 737 MAX) ವಿಮಾನವೊಂದು ಅಪಘಾತಕ್ಕೀಡಾಗಿತ್ತು. ಈ ವೇಳೆ 157 ಮಂದಿ ಸಾವನ್ನಪ್ಪಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ಕುಟುಂಬಗಳಿಗೆ ಬೋಯಿಂಗ್ ಪರಿಹಾರ ನೀಡುವುದಾಗಿ ತಿಳಿಸಿದೆ.