ನ್ಯೂಯಾರ್ಕ್: ಎಂಜಿನ್ ತೊಂದರೆಯಿಂದಾಗಿ ಬೋಯಿಂಗ್ 737 ಸರಕು ವಿಮಾನವು ಶುಕ್ರವಾರ ನೀರಿನ ಮೇಲೆ ತುರ್ತು ಲ್ಯಾಂಡಿಂಗ್ ಮಾಡಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.
"ಪ್ರಾಥಮಿಕ ಮಾಹಿತಿಯ ಪ್ರಕಾರ, ಯುಎಸ್ ಕೋಸ್ಟ್ ಗಾರ್ಡ್ ಇಬ್ಬರು ಸಿಬ್ಬಂದಿಗಳನ್ನು ರಕ್ಷಿಸಿದೆ. ಎಫ್ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಈ ಘಟನೆಯ ತನಿಖೆ ನಡೆಸಲಿದೆ" ಎಂದು ಹೇಳಿಕೆ ತಿಳಿಸಿದೆ.