ವಾಷಿಂಗ್ಟನ್ (ಅಮೆರಿಕ):ಯುರೋಪಿಯನ್ ಯೂನಿಯನ್ ವಿದೇಶಾಂಗ ವ್ಯವಹಾರಗಳ ಮಂಡಳಿಯೊಂದಿಗಿನ ವರ್ಚುಯಲ್ ಸಭೆಯಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರು, ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಷ್ಯಾದ ವಿರುದ್ಧ ಮತ್ತು ಯುರೋಪಿಯನ್ ಯೂನಿಯನ್ ಪಾಲುದಾರರೊಂದಿಗೆ ಯುನೈಟೆಡ್ ಸ್ಟೇಟ್ಸ್ ಸಮನ್ವಯವನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.
ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಇಯು ಉನ್ನತ ಪ್ರತಿನಿಧಿ ಜೋಸೆಪ್ ಬೊರೆಲ್ ಅವರ ಆಹ್ವಾನದ ಮೇರೆಗೆ ಇಂದಿನ ಯುರೋಪಿಯನ್ ಯೂನಿಯನ್ ವಿದೇಶಾಂಗ ವ್ಯವಹಾರಗಳ ಸಭೆಯಲ್ಲಿ ಭಾಗವಹಿಸಿದರು. ಯುನೈಟೆಡ್ ಸ್ಟೇಟ್ಸ್ ರಷ್ಯಾದ ಆಕ್ರಮಣ ತಡೆಯಲು ಮುಂದಿನ ಕ್ರಮಗಳಿಗೆ ಒತ್ತು ನೀಡಲಾಗುವುದು, ಯುರೋಪಿಯನ್ ಯೂನಿಯನ್ ಪಾಲುದಾರರೊಂದಿಗೆ ಮುಂದುವರಿಯಲಾಗುವುದು ಎಂದು ತಿಳಿಸಿದರು.