ವಾಷಿಂಗ್ಟನ್ (ಯುಎಸ್): ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಇಂದು ವಿದೇಶಾಂಗ ನೀತಿ ಭಾಷಣ ಮಾಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿದೇಶಾಂಗ ನೀತಿ ಕುರಿತು ಆ್ಯಂಟನಿ ಬ್ಲಿಂಕೆನ್ ಭಾಷಣ - ವಾಷಿಂಗ್ಟನ್ ಸುದ್ದಿ
ಇಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ವಿದೇಶಾಂಗ ನೀತಿಯ ಕುರಿತು ಭಾಷಣ ಮಾಡಲಿದ್ದಾರೆ ಎಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆ್ಯಂಟನಿ ಬ್ಲಿಂಕೆನ್
"ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಯುಎಸ್ ವಿದೇಶಾಂಗ ನೀತಿಯ ಕುರಿತು ಬೆಳಗ್ಗೆ 11:00 ಗಂಟೆಗೆ (ಇಎಸ್ಟಿ) ಮಾರ್ಚ್ 3, 2021ರಂದು ರಾಜ್ಯ ಇಲಾಖೆಯಲ್ಲಿ ಭಾಷಣ ಮಾಡಲಿದ್ದಾರೆ" ಎಂದು ತಿಳಿಸಿದೆ.
ರಷ್ಯಾದ ಮೇಲಿನ ಹೊಸ ಯುಎಸ್ ನಿರ್ಬಂಧಗಳು, ಸೌದಿ ಅರೇಬಿಯಾದೊಂದಿಗಿನ ಸಂಬಂಧವನ್ನು ಮರು ಸಂಗ್ರಹಿಸುವ ಪ್ರಯತ್ನ, ಯೆಮನ್‌ನಲ್ಲಿ ಸಂಕಷ್ಟ ಪರಿಹಾರ ಮತ್ತು ಇರಾನಿನ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸುವ ರಾಜತಾಂತ್ರಿಕ ಒತ್ತಡವನ್ನು ಅನುಸರಿಸುವ ವಿಷಯದ ಬಗ್ಗೆ ಭಾಷಣ ಮಾಡಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.