ಕರ್ನಾಟಕ

karnataka

ETV Bharat / international

ಆಸ್ಟ್ರೇಲಿಯಾದಾದ್ಯಂತ ಶಾಂತಿಯುತ 'ಬ್ಲಾಕ್​​ ಲೈವ್ಸ್​​​​ ಮ್ಯಾಟರ್​​' ಪ್ರತಿಭಟನೆ - George Floyd

ಜಾರ್ಜ್ ಫ್ಲಾಯ್ಡ್ ಅವರ ಸಾವು ಖಂಡಿಸಿ ಆಸ್ಟ್ರೇಲಿಯಾದಾದ್ಯಂತ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳು ಬಹುತೇಕ ಶಾಂತಿಯಿಂದ ಕೂಡಿವೆ.

'Black Lives Matter' protests mostly peaceful in Australia
ಶಾಂತಿಯುತವಾದ ಪ್ರತಿಭಟನೆ

By

Published : Jun 7, 2020, 12:49 AM IST

ಸಿಡ್ನಿ (ಆಸ್ಟ್ರೇಲಿಯಾ):ಜಾರ್ಜ್ ಫ್ಲಾಯ್ಡ್ ಅವರ ಸಾವು ಖಂಡಿಸಿ ಮತ್ತು ಯುಎಸ್​​ ಪ್ರತಿಭಟನಾಕಾರರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಎಂಬ ಸಂಕೇತದಲ್ಲಿ ಆಸ್ಟ್ರೇಲಿಯಾದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಬಹುತೇಕ ಶಾಂತಿಯುತವಾಗಿವೆ.

ನ್ಯೂಸೌತ್ ವೇಲ್ಸ್ ನ್ಯಾಯಾಲಯವು ಶುಕ್ರವಾರ ಪ್ರತಿಭಟನಾ ರ್ಯಾಲಿಗೆ ಅವಕಾಶ ನೀಡದ ಕಾರಣ ಪ್ರತಿಭಟನಾ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. ಸರ್ಕಾರ ಈ ಪ್ರತಿಭಟನೆಯನ್ನು ಕಾನೂನುಬಾಹಿರ ಎಂದು ಪರಿಗಣಿಸಿ ಪ್ರತಿಭಟನೆ ತಡೆಯಲು ಪ್ರಯತ್ನಿಸುತ್ತಿದೆ ಎಂದು ಸಂಘಟನೆಗಳು ಆರೋಪಿಸಿದ್ದವು. ಇಂದು ರ್ಯಾಲಿ ಪ್ರಾರಂಭವಾಗುವ 12 ನಿಮಿಷಗಳ ಮೊದಲು ನ್ಯಾಯಾಲಯ ಅನುಮತಿ ನೀಡಿತು.

ಸಿಡ್ನಿಯ ಟೌನ್​​ಹಾಲ್ ಪ್ರದೇಶದಲ್ಲಿ ರ್ಯಾಲಿ ನಿರ್ಧಾರಕ್ಕೂ ಮುಂಚಿತವಾಗಿಯೇ 1,000 ಪ್ರತಿಭಟನಾಕಾರರು ಜಮಾಯಿಸಿದ್ದರು. ಕ್ವೀನ್ಸ್‌ಲ್ಯಾಂಡ್ ರಾಜ್ಯದ ರಾಜಧಾನಿಯಾದ ಬ್ರಿಸ್ಬೇನ್‌ನಲ್ಲಿ 30,000 ಜನರು ಒಟ್ಟುಗೂಡಿದರು. ಕೆಲವು ಪ್ರಮುಖ ಬೀದಿಗಳನ್ನು ಮುಚ್ಚುವಂತೆ ಪೊಲೀಸರನ್ನು ಒತ್ತಾಯಿಸಿದರು. ಪ್ರತಿಭಟನಾಕಾರರು ಕಿಂಗ್ ಜಾರ್ಜ್ ಸ್ಕ್ವೇರ್‌ನಿಂದ ನದಿಗೆ ಅಡ್ಡಲಾಗಿ ದಕ್ಷಿಣ ಬ್ರಿಸ್ಬೇನ್‌ಗೆ ಮೆರವಣಿಗೆ ನಡೆಸಿದರು.

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಪ್ರತಿಭಟನಾಕಾರರಿಗೆ ಪೊಲೀಸರು ಮಾಸ್ಕ್​ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಒದಗಿಸಿದರು. ಆಸ್ಟ್ರೇಲಿಯಾ ಜೊತೆಗೆ, ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇರಿದಂತೆ ಇತರ ದೇಶಗಳಲ್ಲಿಯೂ ಶನಿವಾರ ಪ್ರತಿಭಟನೆ ನಡೆಯಿತು. ಸಿಡ್ನಿಯಲ್ಲಿ, 'ವೈಟ್ ಲೈವ್ಸ್', 'ಬ್ಲ್ಯಾಕ್ ಲೈವ್ಸ್', 'ಆಲ್ ಲೈವ್ಸ್ ಮ್ಯಾಟರ್' ಎಂಬ ಸಂಕೇತದಲ್ಲಿ ಪ್ರತಿಭಟನೆ ನಡೆಸಲಾಯಿತು. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಎಲ್ಲೆಡೆಯೂ ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆ

ಮಿನೆಯಾಪೋಲಿಸ್​ನಲ್ಲಿ ನಡೆದ ಆಫ್ರಿಕನ್​ ಅಮೆರಿಕನ್​​ ಜಾರ್ಜ್​​​ ಫ್ಲಾಯ್ಡ್​​​​ ಹತ್ಯೆಯನ್ನು ಖಂಡಿಸಿ ಬ್ಲಾಕ್​​ ಲೈವ್ಸ್​ ಮ್ಯಾಟರ್​​ ಎಂಬ ಪ್ರತಿಭಟನೆಗಳು ನಡೆಯುತ್ತಿವೆ. ಮೇ 25ರಂದು ಪೊಲೀಸರು ಫ್ಲಾಯ್ಡ್​ ಅವರ ಕತ್ತಿನ ಮೇಲೆ ಮೊಣಕಾಲೂರಿದ್ದರು. ಇದರಿಂದ ಆತ ಊರಿರಾಡಲಾಗದೆ ಮೃತಪಟ್ಟಿದ್ದ. ಈ ಸಂಬಂಧ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ABOUT THE AUTHOR

...view details