ವಾಷಿಂಗ್ಟನ್(ಯು.ಎಸ್.ಎ): ಚಲನಚಿತ್ರ ಹಾಗೂ ದೂರದರ್ಶನ ಕ್ಷೇತ್ರಗಳಿಗೆ ಅತ್ಯುತ್ತಮ ಕೊಡುಗೆ ನೀಡಿದ ಕಲಾವಿದರಿಗೆ ಗೌರವ ಸಮರ್ಪಿಸುವ 'ಗೋಲ್ಡನ್ ಗ್ಲೋಬ್ಸ್ 2020 ಗಾಲಾ'
ಕಾರ್ಯಕ್ರಮ ಭಾನುವಾರ ಬೆವರ್ಲಿ ಹಿಲ್ಸ್‌ನಲ್ಲಿ ನಡೆಯಿತು. ಅಮೆರಿಕನ್ ಗಾಯಕ ಬಿಲ್ಲಿ ಪೋರ್ಟರ್ ರೆಡ್ ಕಾರ್ಪೆಟ್ ಮೇಲೆ ಬಿಳಿ ಸೂಟ್ನಲ್ಲಿ ಆಗಮಿಸಿ ಗಮನ ಸೆಳೆದರು.
ಗೋಲ್ಡನ್ ಗ್ಲೋಬ್ಸ್ನ 77 ನೇ ಆವೃತ್ತಿಗೆ ಅಮೆರಿಕದ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದು, ಬಿಲ್ಲಿ ಪೋರ್ಟರ್ ನವಿಲು ಗರಿಯಂತಹ ಬಿಳಿ ಸೂಟ್ ಧರಿಸಿ ದೇವದೂತರಂತೆ ಹಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.