ಅಲಾಸ್ಕಾ(ಯುಎಸ್ಎ):ಕೊರೊನಾ ವೈರಸ್ ಕುರಿತ ಮುಂಜಾಗ್ರತೆ ಬಗ್ಗೆ ಹಲವು ಸೆಲೆಬ್ರಿಟಿಗಳ ವಿಡಿಯೋಗಳು ವೈರಲ್ ಆಗಿವೆ. ಇದೇ ರೀತಿಯಲ್ಲಿ ಕೋವಿಡ್-19 ವಿರುದ್ಧ ಹೋರಾಡಲು 5 ವರ್ಷದ ಅಲಾಸ್ಕಾ ಹುಡುಗಿ ನೀಡಿರುವ ಸುರಕ್ಷತಾ ಸಲಹೆಗಳ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ನೋವಾ ನೈಟ್ ಎಂಬ 5 ವರ್ಷದ ಬಾಲಕಿ ಕೊರೊನಾ ಕುರಿತ ಸುರಕ್ಷತೆ ನೀಡಿ ಒಂದು ವಿಡಿಯೋ ಮಾಡಿದ್ದಾಳೆ. ಅದು ಈಗ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿ ಹಲವರ ಮೆಚ್ಚುಗೆ ಪಡೆದಿದೆ. ಇನ್ನು ಟ್ವಿಟರ್ನಲ್ಲಿ ಈ ವಿಡಿಯೋಗೆ 18,000 ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ.