ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದು, ಗದ್ದುಗೆ ಏರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಈಗಾಗಲೇ ಚುನಾವಣೋತ್ತರ ಸಮೀಕ್ಷೆ ನಡೆಯುತ್ತಿದ್ದು, ಮತದಾರರ ಒಲವು ಯಾರ ಕಡೆಗೆ ಇದೆ ಎಂಬುದನ್ನ ಸಮೀಕ್ಷೆ ನಡೆಸಿ ಇಪ್ಸಾಸ್ ವೆಬ್ಸೈಟ್ ವರದಿ ರಿಲೀಸ್ ಮಾಡಿದೆ
ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಮತದಾರರ ಒಲವು ಜೋ ಬಿಡೆನ್ ಪರ ಹೆಚ್ಚಿದೆ. ಎರಡೂ ರಾಜ್ಯಗಳಲ್ಲಿ ಶೇಕಡಾ 50 ರಷ್ಟು ಮತದಾರರ ಒಲವು ಬಿಡೆನ್ ಪರ ಇದ್ದರೆ, ಪೆನ್ಸಿಲ್ವೇನಿಯಾದಲ್ಲಿ ಅಧ್ಯಕ್ಷ ಟ್ರಂಪ್ ಪರ ಶೇಕಡ 45 ಹಾಗೂ ವಿಸ್ಕಾನ್ಸಿನ್ನಲ್ಲಿ ಶೇಕಡ 46 ರಷ್ಟು ಜನರು ಬೆಂಬಲವಿದೆ ಎಂದು ಸಮೀಕ್ಷೆಗಳಿಂದ ತಿಳಿದು ಬಂದಿದೆ.
ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ತರಲು ಟ್ರಂಪ್ ವಿಫಲವಾಗಿದ್ದಾರೆ. ದೇಶ ಮೊದಲಿನ ರೀತಿ ಆಗಲು ಬಿಡೆನ್ ಉತ್ತಮ ಅಭ್ಯರ್ಥಿ ಎಂದು ಮತದಾರರು ಪರಿಗಣಿಸಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಶೇಕಡ 10 ರಷ್ಟು ವಿಸ್ಕಾನ್ಸಿನ್ನಲ್ಲಿ ಶೇಕಡಾ 9 ರಷ್ಟು ಮತಗಳಿಂದ ಡೆಮಾಕ್ರಟಿಕ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿಗೆ ಕೋವಿಡ್ ದೃಢ ಪಟ್ಟಿದ್ದು, ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಕ್ಟೋಬರ್ 2 ರಂದು ಶ್ವೇತಭವನಕ್ಕೆ ಶಿಫ್ಟ್ ಆಗುತ್ತಿದ್ದಂತೆಯೇ ಸಮೀಕ್ಷೆ ರಿಲೀಸ್ ಆಗಿದ್ದು, ಟ್ರಂಪ್ಗೆ ಮತ್ತಷ್ಟು ಆಘಾತವಾಗಿದೆ.