ಕರ್ನಾಟಕ

karnataka

ETV Bharat / international

ಉಕ್ರೇನ್ ಉದ್ವಿಗ್ನತೆ: ಪುಟಿನ್​ಗೆ ಕರೆ ಮಾಡಿ ಎಚ್ಚರಿಕೆ ನೀಡಿದ ಜೋ ಬೈಡನ್ - Biden warns Putin

ಉಕ್ರೇನ್ ಉದ್ವಿಗ್ನತೆಯನ್ನು ತಗ್ಗಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಒತ್ತಾಯಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಲು ಮುಂದಾದರೆ ನಾವು, ನಮ್ಮ ಮಿತ್ರರಾಷ್ಟ್ರಗಳು ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತೇವೆ, ವೆಚ್ಚದ ಹೊರೆಯನ್ನು ಭರಿಸಬೇಕಾಗುತ್ತದೆ ಎಂದು ಬೈಡನ್​ ಗರಂ ಆಗಿದ್ದಾರೆ.

ಪುಟಿನ್​ಗೆ ಎಚ್ಚರಿಕೆ ನೀಡಿದ ಅಮೆರಿಕ
ಪುಟಿನ್​ಗೆ ಎಚ್ಚರಿಕೆ ನೀಡಿದ ಅಮೆರಿಕ

By

Published : Feb 13, 2022, 10:17 AM IST

Updated : Feb 13, 2022, 10:30 AM IST

ವಾಷಿಂಗ್ಟನ್: ಉಕ್ರೇನ್ ಒಳಗೆ ನುಸುಳುವ ಪ್ರಯತ್ನ ಮುಂದುವರಿಸಿದರೆ ರಷ್ಯಾದ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸುವುದೂ ಸೇರಿದಂತೆ ಬಿಕ್ಕಟ್ಟನ್ನು ಕೊನೆಗೊಳಿಸಲು ಅಮೆರಿಕ ಸಿದ್ಧವಾಗಿದೆ ಎಂದು ಶ್ವೇತಭವನ ಶನಿವಾರ ಪ್ರಕಟಣೆಯಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಉಕ್ರೇನ್ ಗಡಿಯುದ್ದಕ್ಕೂ ರಷ್ಯಾ ತನ್ನ ಲಕ್ಷಾಂತರ ಸೈನಿಕರನ್ನು ಜಮಾವಣೆ ಮಾಡಿದ್ದು, ಯಾವುದೇ ಸಂದರ್ಭದಲ್ಲಿಯೂ ಯುದ್ಧ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಶ್ವೇತಭವನ ಹೇಳಿದೆ.

ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿದ್ರೆ ಸಾರ್ವಜನಿಕರು ಅಪಾರ ಪ್ರಮಾಣದ ಸಾವು-ನೋವುಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ರಷ್ಯಾ ವಿರುದ್ಧ ಕ್ರಮ ಕೈಗೊಳ್ಳಲಿವೆ. ಸಂಭವನೀಯ ಹಾನಿಗೆ ನಿರ್ಬಂಧಗಳನ್ನು ಹೇರಲಾಗುವುದು, ಜೊತೆಗೆ ವೆಚ್ಚಗಳನ್ನು ಭರಿಸಬೇಕಾಗುತ್ತದೆ ಎಂದು ಜೋ ಬೈಡನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Last Updated : Feb 13, 2022, 10:30 AM IST

ABOUT THE AUTHOR

...view details