ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಗುರುವಾರ ಅಮೆರಿಕದ ನಾಗರಿಕರನ್ನು ತಕ್ಷಣವೇ ಉಕ್ರೇನ್ ತೊರೆಯುವಂತೆ ಒತ್ತಾಯಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಭೀತಿಯ ನಡುವೆ ಗಡಿಯಲ್ಲಿ ಸೈನಿಕರನ್ನು ನಿಯೋಜಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ 1,700 ಸೈನಿಕರನ್ನು ಒಳಗೊಂಡ ಯುಎಸ್ ಪಡೆಗಳು ಉಕ್ರೇನ್ ಗಡಿ ಸಮೀಪವಿರುವ ಆಗ್ನೇಯ ಪೋಲೆಂಡ್‌ಗೆ ಬಂದಿಳಿದಿವೆ.
ಇದನ್ನೂಓದಿ:ಹಿಜಾಬ್ ಸಂಘರ್ಷ: ಹೈಕೋರ್ಟ್ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ
ಉಕ್ರೇನ್ ಸುತ್ತಲೂ ರಷ್ಯಾ ಅಪಾರ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ನಿಯೋಜಿಸಿದೆ. ಅವರ ಚಲನವಲನವು ಅಸಹಜ ರೀತಿಯಲ್ಲಿದೆ ಎಂದು ಅಮೆರಿಕ ಮತ್ತು ನ್ಯಾಟೋ ತಿಳಿಸಿವೆ. ಜೋ ಬೈಡೆನ್ ಮತ್ತು ಯುರೋಪಿಯನ್ ನಾಯಕರ ಎಚ್ಚರಿಕೆಯ ನಡುವೆಯೂ ಪುಟಿನ್ ತಮ್ಮ 1 ಲಕ್ಷ ಪಡೆಗಳನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸಿದ್ದಾರೆ ಎಂಬ ಮಾಹಿತಿ ಇದೆ. ಶೀಘ್ರದಲ್ಲಿಯೇ ಅದು ಉಕ್ರೇನ್‌ನಲ್ಲಿ ತನ್ನ ಸೇನಾ ಕಾರ್ಯಾಚರಣೆಗಳನ್ನು ನಡೆಸುವ ಸಾಧ್ಯತೆ ಕಾಣುತ್ತಿದೆ.
ಉಕ್ರೇನ್ ಅಥವಾ ನ್ಯಾಟೋ ದೇಶಗಳ ಗಡಿಯಲ್ಲಿ ರಷ್ಯಾ ತನ್ನ ಸೇನಾ ಜಮಾವಣೆಯನ್ನು ಹೆಚ್ಚಿಸಿದರೆ, ಉಕ್ರೇನ್‌ನಲ್ಲಿ ಸಂಘರ್ಷದ ಅಪಾಯ ಮತ್ತಷ್ಟು ಭುಗಿಲೇಳುವುದು ಖಚಿತ. ಇದು ಮುಂದೆ ಭೀಕರ ಯುದ್ಧಕ್ಕೆ ಎಡೆ ಮಾಡಿಕೊಡಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.