ಸ್ಯಾನ್ ಡಿಯಾಗೋ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೆ ತಂದಿದ್ದ ವಲಸೆ ನೀತಿಯ ವಿರುದ್ಧವಿದ್ದ ಪ್ರಕರಣಗಳನ್ನು ನ್ಯಾಯಾಲಯ ಮುಕ್ತಾಯಗೊಳಿಸಿದ್ದು, ಯುಎಸ್ನಲ್ಲಿ ಆಶ್ರಯ ಪಡೆಯಲು ಬಯಸುವ 25,000 ಜನರಿಗೆ ಅನುಮತಿ ನೀಡಲು ಜೋ ಬೈಡನ್ ಮುಂದಾಗಿದ್ದಾರೆ.
ಯುಎಸ್ ಆಶ್ರಯ ಪಡೆಯಲು ಬಯಸಿದ 25,000 ನಿರಾಶ್ರಿತರ ಪರ ನಿಂತ ದೊಡ್ಡಣ್ಣ ಬೈಡನ್ - Biden administration on US immigration
ಅಧ್ಯಕ್ಷ ಬೈಡನ್ ಸ್ಪಷ್ಟಪಡಿಸಿದಂತೆ ಯುಎಸ್ ಸರ್ಕಾರವು ಸುರಕ್ಷಿತ, ಕ್ರಮಬದ್ಧ ಮತ್ತು ಮಾನವೀಯ ವಲಸೆ ವ್ಯವಸ್ಥೆಯನ್ನು ಪುನರ್ನಿರ್ಮಿಸಲು ಬದ್ಧವಾಗಿದೆ..

ಟ್ರಂಪ್ ಕಾಲದ ಆದೇಶ ರದ್ದಾಗುವುದರಿಂದ ವಾರ್ಷಿಕ 25 ಸಾವಿರ ನಿರಾಶ್ರಿತರಿಗೆ ಅಮೆರಿಕ ಪ್ರವೇಶಕ್ಕೆ ಅನುಮತಿ ಸಿಗಲಿದೆ. ಒಬಾಮಾ ಕಾಲದಲ್ಲಿ ವರ್ಷಕ್ಕೆ 1.25 ಲಕ್ಷ ಮಂದಿಗೆ ಅವಕಾಶ ನೀಡಲಾಗಿತ್ತು. ಆದರೆ, ಬೈಡನ್ ಈ ಎಲ್ಲಾ ಎಲ್ಲೆಗಳನ್ನು ಮೀರಿ ವಲಸಿಗರಿಗೂ ಅಮೆರಿಕದಲ್ಲಿ ಅವಕಾಶ ಕಲ್ಪಿಸತೊಡಗಿದ್ದಾರೆ.
ಅಧ್ಯಕ್ಷ ಬೈಡನ್ ಸ್ಪಷ್ಟಪಡಿಸಿದಂತೆ ಯುಎಸ್ ಸರ್ಕಾರವು ಸುರಕ್ಷಿತ, ಕ್ರಮಬದ್ಧ ಮತ್ತು ಮಾನವೀಯ ವಲಸೆ ವ್ಯವಸ್ಥೆಯನ್ನು ಪುನರ್ನಿರ್ಮಿಸಲು ಬದ್ಧವಾಗಿದೆ. ವಲಸೆ ನೀತಿಗಳನ್ನು ಸುಧಾರಿಸುವಲ್ಲಿ ನಾವು ಮತ್ತೊಂದು ಹೆಜ್ಜೆ ಇಡುತ್ತಿದ್ದೇವೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಅಲೆಜಾಂಡ್ರೊ ಮಯೋರ್ಕಾಸ್ ಹೇಳಿದ್ದಾರೆ.