ವಾಷಿಂಗ್ಟನ್, ಅಮೆರಿಕ:ಸುಮಾರು 49 ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಒರ್ಲಾಂಡೋದ ಪಲ್ಸ್ ನೈಟ್ ಕ್ಲಬ್ ಗುಂಡಿನ ದಾಳಿ ಪ್ರಕರಣ ನಡೆದು ಐದು ವರ್ಷ ಪೂರ್ಣಗೊಂಡಿದ್ದು, ಈ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡುವ ಮಸೂದೆಗೆ ಸಹಿ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಪಷ್ಟನೆ ನೀಡಿದ್ದಾರೆ.
ಘಟನೆಯಲ್ಲಿ ಬದುಕುಳಿದವರೊಂದಿಗೆ ಮತ್ತು ಮೃತಪಟ್ಟವರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿರುವ ಜೋ ಬೈಡನ್, ಪಲ್ಸ್ ನೈಟ್ ಕ್ಲಬ್ ಅನ್ನು ಪವಿತ್ರ ಮೈದಾನ ಎಂದು ವರ್ಣಿಸಿದ್ದಾರೆ.
ಹಿಂಸಾಚಾರವನ್ನು ಕಡಿಮೆ ಮಾಡಲು ದೇಶವು ಹೆಚ್ಚಿನದನ್ನು ಮಾಡಬೇಕು ಎಂದು ಬೈಡನ್ ಪ್ರತಿಪಾದಿಸಿದ್ದು, ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವುದು ಮತ್ತು ಗನ್ ಖರೀದಿದಾರರ ಹಿನ್ನೆಲೆಗಳನ್ನು ಪರಿಶೀಲನೆ ಮಾಡುವುದು ಅತ್ಯಂತ ಮುಖ್ಯ ಎಂದಿದ್ದಾರೆ.