ವಾಷಿಂಗ್ಟನ್:ಅಮೆರಿಕ ಪ್ರವೇಶಿಸುವ ನಿರಾಶ್ರಿತರು ಸಂಖ್ಯೆಯ ಮಿತಿಯನ್ನು ಹೆಚ್ಚಿಸಲಿದ್ದು, ಇದಕ್ಕಾಗಿ ಬೈಡನ್ ಆಡಳಿತ ಸಿದ್ಧತೆ ನಡೆಸುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರದಿಂದ ಹೊರಡುವ ಮುನ್ನ ನಿರಾಶ್ರಿತರ ಪ್ರವೇಶ ಶಿಬಿರವನ್ನು ಕೇವಲ 15,000ಕ್ಕೆ ಇಳಿಸಿದ್ದರು. ಬೈಡನ್ ಅವರ ಯೋಜನೆಯು ಆ ಸಂಖ್ಯೆಯನ್ನು 125,000ಕ್ಕೆ ಏರಿಸಲಿದೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಅಧಿಕಾರದಿಂದ ಹೊರನಡೆಯುವ ಮೊದಲು ನಿಗದಿಪಡಿಸಿದ ಸಂಖ್ಯೆಗಿಂತ 15,000 ಹೆಚ್ಚಳವಾಗಿದೆ.
ಔಪಚಾರಿಕ ಪ್ರಕಟಣೆಗೂ ಮುಂಚಿತವಾಗಿ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು, ಗುರುವಾರ ರಾಜ್ಯ ಇಲಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೈಡನ್ ಅವರು ತಮ್ಮ ಈ ಯೋಜನೆಯನ್ನು ಸಾರ್ವಜನಿಕಗೊಳಿಸುವುದಾಗಿ ಹೇಳಿದ್ದಾರೆ ಎಂದಿದ್ದಾರೆ .