ವಾಷಿಂಗ್ಟನ್: ಕೊರೊನಾ ಲಸಿಕೆ ಜಾಗತಿಕ ಮಟ್ಟದಲ್ಲಿ ಬಡ ಜನರಿಗೆ ತಲುಪುವ ನಿಟ್ಟಿನಲ್ಲಿ ಮತ್ತು ವಿತರಣೆಯನ್ನು ಹೆಚ್ಚಿಸುವ ಸಲುವಾಗಿ ಅಧ್ಯಕ್ಷ ಜೋ ಬೈಡನ್ ಅವರು ಸುಮಾರು 4 ಬಿಲಿಯನ್ ಸಹಾಯದನ ಬಿಡುಗಡೆ ಮಾಡಲು ಚಿಂತಿಸಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ಬಿಕ್ಕಟ್ಟಿನ ಆರಂಭದಲ್ಲಿ, ಚೀನಾದ ತಪ್ಪುಗಳನ್ನು ಮುಚ್ಚಿಹಾಕುವ ಯತ್ನ ಮಾಡುತ್ತಿದ್ದೆ ಎಂದು ಆರೋಪಿಸಿ ಜಿನೀವಾ ಮೂಲದ ಡಬ್ಲ್ಯುಎಚ್‌ಒ ಜೊತೆಗಿನ ಕೋವಾಕ್ಸ್ ಉಪಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಆದರೆ, ಇದೀಗ ಅಧ್ಯಕ್ಷ ಬೈಡನ್ ಯುಎಸ್ ಜಾಗತಿಕ ಮಟ್ಟದಲ್ಲಿ ಕೋವಿಡ್ ಲಸಿಕೆ ಅಭಿವೃದ್ಧಿ ಮಾಡಲು ಕೊಡುಗೆ ನೀಡುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.