ಕರ್ನಾಟಕ

karnataka

ETV Bharat / international

ಇಬ್ಬರು ಭಾರತೀಯ ಅಮೆರಿಕನ್ನರನ್ನು ಶ್ವೇತಭವನದ ಕೌನ್ಸಿಲ್ ಕಚೇರಿಗೆ ಹೆಸರಿಸಿದ ಜೋ ಬೈಡನ್

ಶ್ವೇತಭವನದ ಕೌನ್ಸಿಲ್ ಕಚೇರಿಗೆ ಇಬ್ಬರು ಭಾರತೀಯ ಅಮೆರಿಕನ್ನರು ಹೆಸರಿಸಲಾಗಿದೆ. ರೀಮಾ ಶಾ ಅವರನ್ನು ಡೆಪ್ಯೂಟಿ ಅಸೋಸಿಯೇಟ್ ಕೌನ್ಸಿಲ್ ಎಂದು ಹೆಸರಿಸಲಾಗಿದ್ದು, ನೇಹಾ ಗುಪ್ತಾ ಅವರನ್ನು ಅಸೋಸಿಯೇಟ್ ಕೌನ್ಸಿಲ್ ಎಂದು ಹೆಸರಿಸಲಾಗಿದೆ.

indo americans
indo americans

By

Published : Jan 12, 2021, 10:10 AM IST

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಇಬ್ಬರು ಭಾರತೀಯ ಅಮೆರಿಕನ್ನರಾದ ರೀಮಾ ಶಾ ಮತ್ತು ನೇಹಾ ಗುಪ್ತಾ ಅವರನ್ನು ಶ್ವೇತಭವನದ ಕೌನ್ಸಿಲ್ ಕಚೇರಿಗೆ ಹೆಸರಿಸಿದ್ದಾರೆ.

ಬೈಡೆನ್ - ಹ್ಯಾರಿಸ್ ಅಭಿಯಾನದ ಕುರಿತು ಚರ್ಚಾ ತಯಾರಿ ತಂಡದಲ್ಲಿ ಸೇವೆ ಸಲ್ಲಿಸಿದ್ದ ರೀಮಾ ಶಾ ಅವರನ್ನು ಡೆಪ್ಯೂಟಿ ಅಸೋಸಿಯೇಟ್ ಕೌನ್ಸಿಲ್ ಎಂದು ಹೆಸರಿಸಲಾಗಿದ್ದು, ಪ್ರಸ್ತುತ ಬೈಡೆನ್-ಹ್ಯಾರಿಸ್ ಪರಿವರ್ತನೆಗಾಗಿ ಜನರಲ್ ಕೌನ್ಸಿಲ್ ಕಚೇರಿಯಲ್ಲಿ ವಕೀಲರಾಗಿರುವ ನೇಹಾ ಗುಪ್ತಾ ಅವರನ್ನು ಅಸೋಸಿಯೇಟ್ ಕೌನ್ಸಿಲ್ ಎಂದು ಹೆಸರಿಸಲಾಗಿದೆ.

ರೀಮಾ ಶಾ ಅವರು ಲಾಥಮ್ ಮತ್ತು ವಾಟ್ಕಿನ್ಸ್‌ನಲ್ಲಿ ಅಸೋಸಿಯೇಟ್ ಮತ್ತು ನ್ಯಾಯಾಂಗ ಇಲಾಖೆಯಲ್ಲಿ ಸಾಲಿಸಿಟರ್ ಜನರಲ್ ಕಚೇರಿಯಲ್ಲಿ ಬ್ರಿಸ್ಟೋ ಫೆಲೋ ಆಗಿದ್ದರು. ಅವರು ಯುಎಸ್ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಮೂರ್ತಿ ಎಲೆನಾ ಕಗನ್ ಮತ್ತು ಡಿಸಿ ಸರ್ಕ್ಯೂಟ್​ಗಾಗಿ ಯುಎಸ್ ಕೋರ್ಟ್ ಆಫ್ ಅಪೀಲ್ಸ್​ನಲ್ಲಿ ನ್ಯಾಯಾಧೀಶ ಶ್ರೀನಿವಾಸನ್ ಅವರಿಗೆ ಕಾನೂನು ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದರು. ಮೂಲತಃ ನ್ಯೂಜೆರ್ಸಿಯವರಾದ ಶಾ, ಹಾರ್ವರ್ಡ್ ಕಾಲೇಜು, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಯೇಲ್ ಕಾನೂನು ಶಾಲೆಯ ಪದವೀಧರರಾಗಿದ್ದಾರೆ.

ನೇಹಾ ಗುಪ್ತಾ ಸ್ಯಾನ್ ಫ್ರಾನ್ಸಿಸ್ಕೋ ಸಿಟಿ ಅಟಾರ್ನಿ ಕಚೇರಿಯಲ್ಲಿ ಉಪ ನಗರ ವಕೀಲರಾಗಿ ಸೇವೆ ಸಲ್ಲಿಸಿದರು. ಅಲ್ಲಿ ಅವರು ಹಲವಾರು ನಗರ ಸಂಸ್ಥೆಗಳಿಗೆ ಸಾಮಾನ್ಯ ಸಲಹೆಗಾರರಾಗಿದ್ದರು. ಈ ಹಿಂದೆ ಗುಪ್ತಾ ಒಂಬತ್ತನೇ ಸರ್ಕ್ಯೂಟ್​ಗಾಗಿ ಯುಎಸ್ ಕೋರ್ಟ್ ಆಫ್ ಅಪೀಲ್ಸ್​ನ ನ್ಯಾಯಾಧೀಶ ಮೈಕೆಲ್ ಡಾಲಿ ಹಾಕಿನ್ಸ್ ಮತ್ತು ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಗಾಗಿ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್​ನ ನ್ಯಾಯಾಧೀಶ ರಿಚರ್ಡ್ ಸೀಬೋರ್ಗ್ ಅವರಿಗೆ ಗುಮಾಸ್ತರಾಗಿದ್ದರು. ಭಾರತೀಯ ವಲಸಿಗರಿಗೆ ಜನಿಸಿದ ನ್ಯೂಯಾರ್ಕ್ ಮೂಲದ ಗುಪ್ತಾ ಹಾರ್ವರ್ಡ್ ಕಾಲೇಜು ಮತ್ತು ಸ್ಟ್ಯಾನ್‌ಫೋರ್ಡ್ ಕಾನೂನು ಶಾಲೆಯ ಪದವೀಧರರಾಗಿದ್ದಾರೆ.

ABOUT THE AUTHOR

...view details