ಕರ್ನಾಟಕ

karnataka

By

Published : Aug 22, 2021, 3:29 PM IST

ETV Bharat / international

ಅಫ್ಘಾನಿಸ್ತಾನದ ಭದ್ರತಾ ಪರಿಸ್ಥಿತಿ ಕುರಿತು ರಾಷ್ಟ್ರೀಯ ಭದ್ರತಾ ತಂಡದ ಜತೆ ಯುಎಸ್​ ಅಧ್ಯಕ್ಷ ಬೈಡನ್ ಚರ್ಚೆ

ಅಫ್ಘಾನಿಸ್ತಾನವು ದಶಕಗಳಲ್ಲಿನ ಅತ್ಯಂತ ಭೀಕರವಾದ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ. ಭಯೋತ್ಪಾದಕ ಗುಂಪು ಅಫ್ಘಾನ್ ರಾಜಧಾನಿಯ ನಿಯಂತ್ರಣವನ್ನು ಘೋಷಿಸಿದ ತಕ್ಷಣ, ಹಲವಾರು ದೇಶಗಳು ತಮ್ಮ ರಾಜತಾಂತ್ರಿಕ ಸಿಬ್ಬಂದಿಯನ್ನು ದೇಶದಿಂದ ಸ್ಥಳಾಂತರಿಸಿದವು. ಸಾವಿರಾರು ಜನರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಅಫ್ಘಾನಿಸ್ತಾನವನ್ನು ತೊರೆಯುವ ಹತಾಶ ಪ್ರಯತ್ನದಲ್ಲಿ ಸೇರಿಕೊಂಡರು..

Biden meets national security team to discuss situation in Afghanistan
ಯುಎಸ್​ ಅಧ್ಯಕ್ಷ ಬೈಡನ್ ಚರ್ಚೆ

ವಾಷಿಂಗ್ಟನ್ (ಯುಎಸ್):ಅಫ್ಘಾನಿಸ್ತಾನದ ಭದ್ರತಾ ಪರಿಸ್ಥಿತಿ ಕುರಿತು ಚರ್ಚಿಸಲು ಯುಎಸ್​ ಅಧ್ಯಕ್ಷ ಜೋ ಬೈಡನ್ ತಮ್ಮ ರಾಷ್ಟ್ರೀಯ ಭದ್ರತಾ ತಂಡವನ್ನು ಭೇಟಿ ಮಾಡಿದ್ದಾರೆ ಎಂದು ಶ್ವೇತಭವನ ಭಾನುವಾರ ತಿಳಿಸಿದೆ.

ಸಭೆಯಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳು, ಸ್ಥಳಾಂತರಿಸುವ ಪ್ರಯತ್ನಗಳು ಮತ್ತು ಹೆಚ್ಚುವರಿ ತೃತೀಯ ರಾಷ್ಟ್ರಗಳ ಸಾಗಾಣಿಕೆ ಕೇಂದ್ರಗಳೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸಲು ತೀವ್ರ ರಾಜತಾಂತ್ರಿಕ ಪ್ರಯತ್ನಗಳ ಬಗ್ಗೆ ಚರ್ಚಿಸಲಾಯಿತು.

"ಇಂದು ಬೆಳಗ್ಗೆ, ಅಧ್ಯಕ್ಷರು ತಮ್ಮ ರಾಷ್ಟ್ರೀಯ ಭದ್ರತಾ ತಂಡವನ್ನು ಭೇಟಿಯಾಗಿ ಅಫ್ಘಾನಿಸ್ತಾನದ ಭದ್ರತಾ ಪರಿಸ್ಥಿತಿ, ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ, ಸ್ಥಳಾಂತರಿಸುವ ಪ್ರಯತ್ನಗಳು ಮತ್ತು ಹೆಚ್ಚುವರಿ ತೃತೀಯ ರಾಷ್ಟ್ರಗಳ ಸಾಗಾಣಿಕೆ ಕೇಂದ್ರಗಳೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳ ಕುರಿತು ಚರ್ಚಿಸಿದರು" ಎಂದು ಶ್ವೇತಭವನ ಟ್ವೀಟ್ ಮಾಡಿದೆ.

ಅಫ್ಘಾನಿಸ್ತಾನವು ದಶಕಗಳಲ್ಲಿನ ಅತ್ಯಂತ ಭೀಕರವಾದ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ. ಭಯೋತ್ಪಾದಕ ಗುಂಪು ಅಫ್ಘಾನ್ ರಾಜಧಾನಿಯ ನಿಯಂತ್ರಣವನ್ನು ಘೋಷಿಸಿದ ತಕ್ಷಣ, ಹಲವಾರು ದೇಶಗಳು ತಮ್ಮ ರಾಜತಾಂತ್ರಿಕ ಸಿಬ್ಬಂದಿಯನ್ನು ದೇಶದಿಂದ ಸ್ಥಳಾಂತರಿಸಿದವು. ಸಾವಿರಾರು ಜನರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಅಫ್ಘಾನಿಸ್ತಾನವನ್ನು ತೊರೆಯುವ ಹತಾಶ ಪ್ರಯತ್ನದಲ್ಲಿ ಸೇರಿಕೊಂಡರು.

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ. ದೇಶಗಳು ತಮ್ಮ ಜನರನ್ನು ಸುರಕ್ಷಿತಗೊಳಿಸುವ ಪ್ರಯತ್ನದಲ್ಲಿ ಅಫ್ಘಾನಿಸ್ತಾನದಿಂದ ತಮ್ಮ ನಾಗರಿಕರನ್ನು ಸ್ಥಳಾಂತರಿಸಲು ಹರಸಾಹಸ ಪಡುತ್ತಿವೆ.

ಓದಿ:ಗಾಳಿಯಲ್ಲಿ ಗುಂಡು ಹಾರಿಸಿದ Taliban: ನೂಕುನುಗ್ಗಲಿನಿಂದ ಕಾಲ್ತುಳಿತ, Kabul Airportನಲ್ಲಿ 7 ಮಂದಿ ಸಾವು

For All Latest Updates

ABOUT THE AUTHOR

...view details