ಕರ್ನಾಟಕ

karnataka

ETV Bharat / international

ಬಿಡೆನ್​ಗೆ ಡೆಮಾಕ್ರಟಿಕ್​​ ಟಿಕೆಟ್​ ಕನ್ಫರ್ಮ್​​​​​​​​; ಟ್ರಂಪ್​ ವಿರುದ್ಧ ಹೋರಾಟಕ್ಕೆ ಸಿದ್ಧ - ಜೋ ಬಿಡೆನ್

ನಾಮನಿರ್ದೇಶನಗೊಳ್ಳಲು ಬೇಕಿದ್ದ 1,991 ಪ್ರತಿನಿಧಿಗಳನ್ನು ನಾವು ಈಗಾಗಲೇ ಪಡೆದಿದ್ದೇವೆ. ನಿಮ್ಮ ಮತಗಳನ್ನು ಪಡೆಯಲು ನಾನು ಪ್ರತಿದಿನ ಹೋರಾಡುತ್ತೇನೆ. ಆ ಮೂಲಕ ಈ ದೇಶಕ್ಕಾಗಿ ಈ ಯುದ್ಧವನ್ನು ನಾವು ಜಂಟಿಯಾಗಿ ಗೆಲ್ಲಬಹುದು ಎಂದು ಬಿಡೆನ್ ಹೇಳಿದ್ದಾರೆ.

Biden
ಬಿಡೆನ್​​

By

Published : Jun 6, 2020, 3:13 PM IST

ವಾಷಿಂಗ್ಟನ್:ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ಜೋ ಬಿಡೆನ್​ ಔಪಚಾರಿಕವಾಗಿ ನಾಮ ನಿರ್ದೇಶನಗೊಂಡಿದ್ದಾರೆ.

ಕೊರೊನಾ ಹೊಡೆತ, ಆರ್ಥಿಕ ಕುಸಿತ ಮತ್ತು ನಾಗರಿಕ ಅಶಾಂತಿಯ ವಿರುದ್ಧ ಎದ್ದು ನಿಲ್ಲಬೇಕಾದ ಸವಾಲನ್ನು ಎದುರಿಸುತ್ತಿರುವ ಅಮೆರಿಕದಲ್ಲಿ, ಅಧ್ಯಕ್ಷ ಹಾಗೂ ರಿಪಬ್ಲಿಕನ್​ ಪಕ್ಷದ ನಾಯಕ ಡೊನಾಲ್ಡ್​ ಟ್ರಂಪ್​ಗೆ ಜೋ ಬಿಡೆನ್ ಸವಾಲು ಹಾಕಲು ಸಿದ್ಧರಾಗಿದ್ದಾರೆ.

ಜೋ ಬಿಡೆನ್​​, ಡೆಮಾಕ್ರಟಿಕ್​ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ

ಡೆಮಾಕ್ರಟಿಕ್ ಪಕ್ಷವು ಕಣಕ್ಕಿಸಿಳಿದ ಅತ್ಯಂತ ಪ್ರತಿಭಾವಂತ ಅಭ್ಯರ್ಥಿಗಳ ಪೈಕಿ ತಾವು ಆಯ್ಕೆ ಆಗಿ ಅಧ್ಯಕ್ಷೀಯ ಚುನವಣೆಗೆ ಸ್ಪರ್ಧಿಸುತ್ತಿರುವುದು ಒಂದು ಗೌರವದ ವಿಷಯವಾಗಿದೆ. ನಾವು ಈ ಸಾರ್ವತ್ರಿಕ ಚುನಾವಣೆಗೆ ಒಟ್ಟಾಗಿ ಹೋಗುತ್ತಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ ಇದೆ ಎಂದು ಬಿಡೆನ್ ಶುಕ್ರವಾರ ಘೋಷಿಸಿದ್ದಾರೆ.

ಟ್ರಂಪ್​ಗೆ ಜೋ ಬಿಡೆನ್ ಸಾವಲು
ಟ್ರಂಪ್​ ವಿರುದ್ಧ ಹೋರಾಟಕ್ಕೆ ಸಿದ್ಧ

ಅಮೆರಿಕದ ಮಾಜಿ ಉಪಾಧ್ಯಕ್ಷರಾಗಿರುವ ಬಿಡೆನ್, ಡೆಮಾಕ್ರಟಿಕ್ ಪಕ್ಷದ ಪ್ರಬಲ ನಾಯಕ. ನಾಮ ನಿರ್ದೇಶನಗೊಳ್ಳಲು ಬೇಕಾದ 1,991 ಪ್ರತಿನಿಧಿಗಳನ್ನು ಬಿಡೆನ್ ಈಗಾಲೇ ಒಟ್ಟುಗೂಡಿಸಿದ್ದಾರೆ. ಇನ್ನೂ ಎಂಟು ರಾಜ್ಯಗಳು ಮತ್ತು ಮೂರು ಯುಎಸ್ ಪ್ರಾಂತ್ಯಗಳಲ್ಲಿ ಚುನಾವಣೆ ಫಲಿತಾಂಶ ಬರಬೇಕಿದೆ.

ಈ ಬಗ್ಗೆ ಟ್ವೀಟ್​ ಮೂಲಕ ತಿಳಿಸಿರುವ ಬಿಡೆನ್​, ನಾಮ ನಿರ್ದೇಶನಗೊಳ್ಳಲು ಬೇಕಿದ್ದ 1,991 ಪ್ರತಿನಿಧಿಗಳನ್ನು ನಾವು ಈಗಾಗಲೇ ಪಡೆದಿದ್ದೇವೆ. ನಿಮ್ಮ ಮತಗಳನ್ನು ಪಡೆಯಲು ನಾನು ಪ್ರತಿದಿನ ಹೋರಾಡುತ್ತೇನೆ. ಆ ಮೂಲಕ ಈ ದೇಶಕ್ಕಾಗಿ ಈ ಯುದ್ಧವನ್ನು ನಾವು ಜಂಟಿಯಾಗಿ ಗೆಲ್ಲಬಹುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details