ಕರ್ನಾಟಕ

karnataka

ಇರಾನ್‌ ವಿರುದ್ಧದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಮುಂದುವರಿಕೆಗೆ ಬೈಡನ್​ ಆದೇಶ

ಇರಾನ್‌ಗೆ ಸಂಬಂಧಿಸಿದಂತೆ ಘೋಷಿಸಿದ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮತ್ತೊಂದು ವರ್ಷ ವಿಸ್ತರಿಸಿ ಯುಎಸ್​ ಅಧ್ಯಕ್ಷ ಜೋ ಬೈಡನ್ ಆದೇಶಿ ಹೊರಡಿಸಿದ್ದಾರೆ.

By

Published : Mar 6, 2021, 12:30 PM IST

Published : Mar 6, 2021, 12:30 PM IST

national emergency declared with respect to Iran  ಇರಾನ್‌ ವಿರುದ್ಧದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಮುಂದುವರಿಕೆಗೆ ಯುಎಸ್​ ಅಧ್ಯಕ್ಷ ಬೈಡನ್​ ಆದೇಶ
ಇರಾನ್‌ ವಿರುದ್ಧದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಮುಂದುವರಿಕೆಗೆ

ವಾಷಿಂಗ್ಟನ್ (ಯುಎಸ್):1995 ರಲ್ಲಿ ಇರಾನ್‌ಗೆ ಸಂಬಂಧಿಸಿದಂತೆ ಘೋಷಿಸಿದ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮತ್ತೊಂದು ವರ್ಷ ವಿಸ್ತರಿಸಿ ಯುಎಸ್​ ಅಧ್ಯಕ್ಷ ಜೋ ಬೈಡನ್ ಆದೇಶಿಸಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ.

ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿಗೆ ಬರೆದ ಪತ್ರದಲ್ಲಿ, ಇರಾನ್​​ಗೆ ಸಂಬಂಧಿಸಿದಂತೆ ಕಾರ್ಯನಿರ್ವಾಹಕ ಆದೇಶ 12957 ರಲ್ಲಿ ಘೋಷಿಸಲಾದ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮುಂದುವರಿಸುವುದು ಮತ್ತು ಇರಾನ್ ವಿರುದ್ಧ ಸಮಗ್ರ ನಿರ್ಬಂಧಗಳನ್ನು ಜಾರಿಗೊಳಿಸುವುದು ಅಗತ್ಯವೆಂದು ನಾನು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:"ಅಮೆರಿಕವನ್ನ ಭಾರತೀಯ ಮೂಲದವರು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ": ಜೋ ಬೈಡನ್

ಇರಾನ್ ಸರ್ಕಾರದ ಕ್ರಮಗಳು ಮತ್ತು ನೀತಿಗಳು, ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಅಮೆರಿಕದ ಆರ್ಥಿಕತೆಗೆ ಅಸಾಮಾನ್ಯ ಮತ್ತು ಅಸಾಧಾರಣ ಬೆದರಿಕೆಯನ್ನು ಒಡ್ಡುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details