ವಾಷಿಂಗ್ಟನ್(ಅಮೆರಿಕ): ಹಣದುಬ್ಬರದ ವಿಚಾರದ ಕುರಿತು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅಸಭ್ಯವಾಗಿ ನಿಂದಿಸಿರುವ ಘಟನೆ ಸುದ್ದಿಗೋಷ್ಠಿಯೊಂದರಲ್ಲಿ ನಡೆದಿದ್ದು, ಜೋ ಬೈಡನ್ ಈಗ ವಿವಾದಕ್ಕೆ ಸಿಲುಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಮೆರಿಕದಲ್ಲಿ ಹೆಚ್ಚಿರುತ್ತಿರುವ ಹಣದುಬ್ಬರದ ಬಗ್ಗೆ ಫಾಕ್ಸ್ ನ್ಯೂಸ್ ವರದಿಗಾರ ಪೀಟರ್ ಡೂಸಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಅಸಮಾಧಾನಗೊಂಡು ಪ್ರತಿಕ್ರಿಯೆ ನೀಡಿರುವ ಜೋ ಬೈಡನ್ 'ಹೆಚ್ಚು ಹಣದುಬ್ಬರವೇ?, ವಾಟ್ ಎ ಸ್ಟುಪಿಡ್ ಸನ್ ಆಫ್ ಎ ಬಿಚ್' ( More inflation? What a stupid son of a bitch) ಎಂದು ಪತ್ರಕರ್ತನನ್ನು ನಿಂದಿಸಿದ್ದಾರೆ.
ಸ್ಟುಪಿಡ್ ಸನ್ ಆಫ್ ಎ ಬಿಚ್ ಎಂಬ ವಾಕ್ಯ ನಿಂದನಾತ್ಮಕ ವಾಕ್ಯವಾಗಿದ್ದು, ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಅಥವಾ ಮೂರ್ಖ ಎಂಬ ಅರ್ಥ ಬರುತ್ತದೆ. ಅಂದಹಾಗೆ ಡೂಸಿ 'ಹಣದುಬ್ಬರವು ರಾಜಕೀಯ ಹೊಣೆಗಾರಿಕೆ ಎಂದು ನೀವು ಭಾವಿಸುತ್ತೀರಾ?' ಎಂದು ಪ್ರಶ್ನಿಸಿದ್ದರು.