ಕರ್ನಾಟಕ

karnataka

ETV Bharat / international

60 ಸೆಕೆಂಡ್​​​ನ ವಿಡಿಯೋ ಬಿಡುಗಡೆ ಮಾಡಿದ ಬಿಡೆನ್​: ಇದರಲ್ಲೇನಿದೆ ಗೊತ್ತಾ?

ಡೆಮಾಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಅವರು ಪ್ರಚಾರದ ವೇಳೆ ಅಮೆರಿಕನ್​​ ಮತ್ತು ಪೆಸಿಫಿಕ್ ದ್ವೀಪವಾಸಿಗಳ ಸಮುದಾಯವನ್ನು ಕುರಿತು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಚುನಾವಣಾ ದಿನದಂದು ಮತ ಚಲಾಯಿಸುವಂತೆ ಒತ್ತಾಯಿಸಲಾಗಿದೆ.

ಯುಎಸ್​ ಉಪಾಧ್ಯಕ್ಷ ಜೋ ಬಿಡೆನ್​
ಯುಎಸ್​ ಉಪಾಧ್ಯಕ್ಷ ಜೋ ಬಿಡೆನ್​

By

Published : Nov 2, 2020, 5:09 PM IST

ವಾಷಿಂಗ್ಟನ್:ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಡೆಮಾಕ್ರಟಿಕ್​ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಮಾಜಿ ಯುಎಸ್​ ಉಪಾಧ್ಯಕ್ಷ ಜೋ ಬಿಡೆನ್​ ಅವರು GOTV (ಗೆಟ್ ಔಟ್ ದಿ ವೋಟ್) ಎಂಬ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಈ ವಿಡಿಯೋ ಮೂಲಕ ಏಷ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ದ್ವೀಪವಾಸಿಗಳಾದ ಆಲ್-ಸ್ಟಾರ್ ವರ್ಗದವರು ನವೆಂಬರ್​ ಮೂರರಂದು ಮತಚಲಾಯಿಸುವಂತೆ ಕೇಳಿಕೊಂಡಿದ್ದಾರೆ.

ಈ ವಿಡಿಯೋ 60 ಸೆಕೆಂಡ್​ ಇದ್ದು, "ವೆನ್ ವಿ ವೋಟ್, ವಿ ವಿನ್" ಎಂಬ ಕಮಲಾ ಹ್ಯಾರಿಸ್​ ಅವರ ಮಾತನ್ನು ಬಳಸಿಕೊಳ್ಳಲಾಗಿದೆ. ಉತ್ತಮ ಅಮೆರಿಕಾವನ್ನು ನಿರ್ಮಿಸಲು ಜೋ ಬಿಡೆನ್​ ಅವರನ್ನು ಬೆಂಬಲಿಸಿ ಎಂದು ಎಎಪಿಐ ಸಮುದಾಯದವರಲ್ಲಿ ಕೇಳಿಕೊಂಡಿದ್ದಾರೆ.

ಈ ವೀಡಿಯೊದಲ್ಲಿ ಏಷ್ಯನ್ ಅಮೆರಿಕದ ಪ್ರಸಿದ್ಧ ವ್ಯಕ್ತಿಗಳಾದ ಮಿಂಡಿ ಕಾಲಿಂಗ್, ಲೂಸಿ ಲಿಯು, ಪದ್ಮ ಲಕ್ಷ್ಮಿ, ಸಾಂಡ್ರಾ ಓಹ್, ಮಾರ್ಗರೇಟ್ ಚೋ, ಲೌ ಡೈಮಂಡ್ ಫಿಲಿಪ್ಸ್, ಮಿಚೆಲ್ ಕ್ವಾನ್ "ಇದು ನಮ್ಮೆಲ್ಲರನ್ನೂ ಕರೆದೊಯ್ಯಲಿದೆ, ನಮ್ಮ ಮಾತಿಗೆ ಇಲ್ಲಿ ಬೆಲೆ ಇದೆ. ಈಗ ಚುನಾವಣಾ ಸಮಯ, ನಾವೆಲ್ಲಾ ಒಟ್ಟಿಗೆ ಸೇರಿ ಉತ್ತಮ ಅಮೆರಿಕಕ್ಕೆ ಮತ ಹಾಕೋಣ " ಎಂದು ಹೇಳಿದ್ದಾರೆ.

ABOUT THE AUTHOR

...view details