ಕರ್ನಾಟಕ

karnataka

ETV Bharat / international

ಪ್ರತಿಭಟನಾಕಾರರನ್ನು ಭಯೋತ್ಪಾದಕರು ಎಂದ ಜೋ ಬೈಡನ್!

ಕಾಂಗ್ರೆಸ್ ಭದ್ರತೆಯನ್ನು ಉಲ್ಲಂಘಿಸಿದ ಟ್ರಂಪ್ ಬೆಂಬಲಿಗರು ದಂಗೆಕೋರರು, ದೇಶೀಯ ಭಯೋತ್ಪಾದಕರು ಎಂದು ಬೈಡನ್ ಹೇಳಿದ್ದಾರೆ. ಈ ಹಿಂಸಾಚಾರಕ್ಕೆ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೂಷಿಸಿದ್ದಾರೆ.

joe biden
joe biden

By

Published : Jan 8, 2021, 6:36 AM IST

Updated : Jan 8, 2021, 7:32 AM IST

ವಾಷಿಂಗ್ಟನ್: ಯುಎಸ್ ಕ್ಯಾಪಿಟಲ್ ಮೇಲೆ ದಾಳಿ ಮಾಡಿದ ಗಲಭೆಕೋರರನ್ನು ದೇಶೀಯ ಭಯೋತ್ಪಾದಕರು ಎಂದು ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಖಂಡಿಸಿದ್ದಾರೆ ಮತ್ತು ರಾಷ್ಟ್ರದ ರಾಜಧಾನಿಯನ್ನು ಮತ್ತು ಬೆಚ್ಚಿಬೀಳಿಸಿದ ಹಿಂಸಾಚಾರಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೂಷಿಸಿದ್ದಾರೆ.

ಕಾಂಗ್ರೆಸ್ ಭದ್ರತೆ ಉಲ್ಲಂಘಿಸಿದ ಟ್ರಂಪ್ ಬೆಂಬಲಿಗರನ್ನು ಪ್ರತಿಭಟನಾಕಾರರು ಎಂದು ಕರೆಯಬೇಡಿ, ಅವರು ದಂಗೆಕೋರರು, ದೇಶೀಯ ಭಯೋತ್ಪಾದಕರು ಬೈಡನ್ ಹೇಳಿದ್ದಾರೆ.

ಪ್ರತಿಭಟನಾಕಾರರ ಕುರಿತು ಜೋ ಬೈಡನ್ ಮಾತು

ಟ್ರಂಪ್ ತನ್ನ ಅಧಿಕಾರಾವಧಿಯಲ್ಲಿ ರಾಷ್ಟ್ರದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಮಟ್ಟಹಾಕಲು ಕೈಗೊಂಡ ಕ್ರಮಗಳು ನೇರವಾಗಿ ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಗಲಭೆಗೆ ಕಾರಣವಾಗಿದೆ ಎಂದು ಬೈಡನ್ ಹೇಳಿದ್ದಾರೆ.

Last Updated : Jan 8, 2021, 7:32 AM IST

ABOUT THE AUTHOR

...view details