ವಾಷಿಂಗ್ಟನ್: 'ಅತ್ಯಂತ ದೊಡ್ಡ ಘಟನೆಯೊಂದು ಈಗ ತಾನೆ ಸಂಭವಿಸಿದೆ' ಎಂದು ಭಾನುವಾರ ಮುಂಜಾನೆ ಟ್ರಂಪ್ ಟ್ವೀಟ್ ಒಂದನ್ನು ಮಾಡಿದ್ದರು. ಟ್ವಿಟರ್ನಲ್ಲಿ ಸದಾ ಸಕ್ರಿಯರಾಗಿರುವ ಅಮೆರಿಕ ಅಧ್ಯಕ್ಷ ಈ ಒಂದು ಸಾಲಿನ ಟ್ವೀಟ್ ವಿಶ್ವಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಟ್ವೀಟ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಂತೆ ಐಸಿಸ್ ಮೇಲೆ ಅಮೆರಿಕ ಸೇನೆ ರಹಸ್ಯ ಕಾರ್ಯಾಚರಣೆಗೆ ವಾರದ ಹಿಂದೆ ಅನುಮತಿ ನೀಡಿತ್ತು ಎನ್ನುವ ವಿಚಾರ ಬಹಿರಂಗವಾಗಿತ್ತು.
ವಿಶ್ವದ ಕುತೂಹಲ ಕೆರಳಿಸಿದೆ ಟ್ರಂಪ್ ನಿಗೂಢ ಟ್ವೀಟ್!
ಅಬು ಬಕರ್ ಅಲ್ ಬಗ್ದಾದಿ... ಐಸಿಸ್ ಹೆಸರಿನ ಜಾಗತಿಕ ಉಗ್ರಸಂಘಟನೆಯ ನಾಯಕ. ಈತನನ್ನು ಅವನ ನೆಲದಲ್ಲೇ ಹೊಡೆದು ಸಾಯಿಸಲು ಅಮೆರಿಕ ಸಾಕಷ್ಟು ಮಾಹಿತಿಯನ್ನು ಕಲೆಹಾಕಿತ್ತು. ಅಮೆರಿಕ ಗುಪ್ತಚರ ಇಲಾಖೆ ಬಗ್ದಾದಿ ಚಲನಚಲನಗಳ ಮೇಲೆ ಕಳೆದ ಕೆಲ ತಿಂಗಳಿನಿಂದ ಕಣ್ಣಿಟ್ಟಿತ್ತು. ಈ ನಿಟ್ಟಿನಲ್ಲಿ ವಾರದ ಹಿಂದೆ ಟ್ರಂಪ್, ರಹಸ್ಯ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.
ಐಸಿಸ್ ಉಗ್ರಸಂಘಟನೆಯ ಏಳು-ಬೀಳಿನ ಹಾದಿ
ಈ ರಹಸ್ಯ ಕಾರ್ಯಾಚರಣೆ ವೇಳೆ ಟರ್ಕಿ, ರಷ್ಯಾ ವಾಯುಮಾರ್ಗವನ್ನು ಅಮೆರಿಕ ಸೇನೆ ಬಳಸಿಕೊಳ್ಳಲಿತ್ತು. ಹೀಗಾಗಿ ಈ ಎರಡೂ ದೇಶಕ್ಕೂ ಆಪರೇಷನ್ ಬಗ್ಗೆ ಮಾಹಿತಿ ನೀಡದೇ ವಾಯುಮಾರ್ಗ ಬಳಕೆಗೆ ಅನುಮತಿ ಕೇಳಿತ್ತು. ಎಲ್ಲವೂ ಓಕೆ ಆಗ್ತಿದ್ದಂತೆ ಅ.27ಕ್ಕೆ ಸೇನೆ ಬಗ್ದಾದಿಗೆ ಮುಹೂರ್ತ ಇಟ್ಟಿತ್ತು.
ಹೀಗಿತ್ತು ಬಗ್ದಾದಿ ಹತ್ಯೆಯ ಕಾರ್ಯಾಚರಣೆ:
ಭಾನುವಾರ ಮುಂಜಾನೆ ಸಿರಿಯಾದಲ್ಲಿ ಬಂದಿಳಿದ ಅಮೆರಿಕ ಸೇನೆ ಒಂದು ಕ್ಷಣವೂ ತಡಮಾಡದೆ ಬಗ್ದಾದಿ ಹತ್ಯೆಗಿಳಿದಿತ್ತು. ಹೆಲಿಕಾಪ್ಟರ್ಗಳ ಮೂಲಕ ಸಿರಿಯಾದ ಬರಿಷಾ ಗ್ರಾಮದಲ್ಲಿ ಇಳಿದ ಸೇನೆ ಜಸ್ಟ್ 30 ನಿಮಿಷದಲ್ಲಿ ಆಪರೇಷನ್ ಮುಗಿಸಿತ್ತು. ಸೇನೆಯ ನಾಯಿಗಳು ಬಗ್ದಾದಿಯನ್ನು ಬೆನ್ನಟ್ಟಿದ ವೇಳೆ ಆತ ರಹಸ್ಯ ಸುರಂಗ ಹೊಕ್ಕಿದ್ದಾನೆ. ಕೆಲ ದೂರ ಕ್ರಮಿಸಿದ ವೇಳೆ ದಾರಿ ಮುಗಿದಿದೆ. ಈ ವೇಳೆ ಭಯಗೊಂಡ ಬಗ್ದಾದಿ ಅಳುತ್ತಾ, ಅರಚಾಡುತ್ತಾ ತನ್ನ ಮೂವರು ಮಕ್ಕಳೊಂದಿಗೆ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾನೆ. ಸ್ಫೋಟದ ತೀವ್ರತೆ ದೇಹಗಳು ಛಿದ್ರ ಛಿದ್ರವಾಗಿತ್ತು. 15 ನಿಮಿಷದಲ್ಲಿ ಡಿಎನ್ಎ ಪರೀಕ್ಷೆ ನಡೆಸಿ ಬಗ್ದಾದಿ ಸಾವನ್ನು ಖಚಿತಪಡಿಸಲಾಗಿದೆ.
ಬಗ್ದಾದಿ ಕಾರ್ಯಾಚರಣೆಯ ಸಂಕ್ಷಿಪ್ತ ನೋಟ
'ಆತ ನಾಯಿಯಂತೆ ಸತ್ತಿದ್ದಾನೆ' ಐಸಿಸ್ ನಾಯಕ ಬಗ್ದಾದಿ ಹತ್ಯೆ ಖಚಿತಪಡಿಸಿದ ಟ್ರಂಪ್!
ಅಮೆರಿಕ ಸೇನೆಯ ಈ ವಿಶೇಷ ಕಾರ್ಯಾಚರಣೆಯನ್ನು ನೇರಪ್ರಸಾರ ವೀಕ್ಷಿಸುತ್ತಿದ್ದ ಟ್ರಂಪ್ ಬಗ್ದಾದಿ ಹತ್ಯೆಯಾಗುತ್ತಿದ್ದಂತೆ ಟ್ವೀಟ್ ಮಾಡಿ ಸೂಚ್ಯವಾಗಿ ಹೇಳಿದ್ದರು. ಬಾಂಬ್ ಸ್ಫೋಟ, ಆತ್ಮಾಹುತಿ ದಾಳಿ ಮೂಲಕವೇ ಜಗತ್ತಿಗೆ ಕಂಟಕವಾಗಿದ್ದ ಬಗ್ದಾದಿ ಒಂದು ಉಗ್ರಸಂಘಟನೆಯ ಮೂಲಕ ಅಕ್ಷರಶಃ ಜಗತ್ತನ್ನೇ ನಡುಗಿಸಿದ್ದ. ಹೀಗಿದ್ದ ಅಬು ಬಕರ್ ಅಲ್ ಬಗ್ದಾದಿ ನಾಯಿಯಂತೆ ಸತ್ತುಬಿದ್ದಿದ್ದಾನೆ ಎಂದು ಭಾನುವಾರ ಟ್ರಂಪ್ ಮಾಧ್ಯಮದ ಮುಂದೆ ಎದೆಯುಬ್ಬಿಸಿ ಹೇಳುವಾಗ ದೊಡ್ಡಣ್ಣನ ಪವರ್ ವಿಶ್ವಕ್ಕೆ ಮತ್ತೊಮ್ಮೆ ಪ್ರದರ್ಶನವಾಗಿತ್ತು.