ಕರ್ನಾಟಕ

karnataka

ETV Bharat / international

ಮಾದಕ ವಸ್ತು ಕಳ್ಳಸಾಗಣೆದಾರರ ಮೇಲೆ ಗುಂಡಿನ ಸುರಿಮಳೆ: ಬ್ರೆಜಿಲ್‌ನಲ್ಲಿ 25 ಮಂದಿ ಸಾವು - ರಿಯೋ ಡಿ ಜನೈರೊದಲ್ಲಿ ಗುಂಡಿನ ಸುರಿಮಳೆ

ಬ್ರೆಜಿಲ್​​ನ ರಿಯೋ ಡಿ ಜನೈರೊದ ಕೊಳೆಗೇರಿ ಪ್ರದೇಶದಲ್ಲಿ ಮಾದಕವಸ್ತು ಕಳ್ಳಸಾಗಣೆದಾರರನ್ನು ಗುರಿಯಾಗಿಸಿಕೊಂಡು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್​ ಅಧಿಕಾರಿ ಹಾಗೂ 24 ಡ್ರಗ್​ ಆರೋಪಿಗಳು ಮೃತಪಟ್ಟಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

25 killed in Rio de Janeiro  favela gun battle
ರಿಯೋ ಡಿ ಜನೈರೊದಲ್ಲಿ ಗುಂಡಿನ ಸುರಿಮಳೆ

By

Published : May 7, 2021, 9:12 AM IST

ರಿಯೋ ಡಿ ಜನೈರೊ (ಬ್ರೆಜಿಲ್): ಮಾದಕವಸ್ತು ಕಳ್ಳಸಾಗಣೆದಾರರನ್ನು ಗುರಿಯಾಗಿಸಿಕೊಂಡು ಪೊಲೀಸರು ಬ್ರೆಜಿಲ್​​ನ ರಿಯೋ ಡಿ ಜನೈರೊದ ಕೊಳೆಗೇರಿ ಪ್ರದೇಶದ ಮೇಲೆ ದಾಳಿ ನಡೆಸಿದ್ದು, ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್​ ಅಧಿಕಾರಿ ಹಾಗೂ 24 ಡ್ರಗ್​ ಆರೋಪಿಗಳು ಮೃತಪಟ್ಟಿದ್ದಾರೆ.

ಗುಂಡಿನ ದಾಳಿ ಬಳಿಕ ಹರಿದ ನೆತ್ತರು

ಶಸ್ತ್ರಸಜ್ಜಿತ ಆರೋಪಿಗಳು, ಪೊಲೀಸರು ಜಕರೆಜಿನ್ಹೋ ಸ್ಲಮ್​ನ ಗಲ್ಲಿ ಗಲ್ಲಿಗಳಲ್ಲಿ, ಸಿಕ್ಕಿ ಸಿಕ್ಕ ಮನೆ ಮನೆಯೊಳಗೆ ಓಡಿದ್ದು, ಇವರನ್ನು ಬೆನ್ನತ್ತಿದ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿಗಳು ಪೊಲೀಸ್ ಅಧಿಕಾರಿಗಳ ಪ್ರಾಣ ತೆಗೆಯಲು ಪ್ರಯತ್ನಿಸಿದ್ದು, ಬೇರೆ ದಾರಿಯಿಲ್ಲದೇ ಶೂಟ್​ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ದಾಳಿ ವೇಳೆ 16 ಪಿಸ್ತೂಲ್‌ಗಳು, 6 ರೈಫಲ್‌ಗಳು, ಒಂದು ಸಬ್‌ಮಷಿನ್ ಗನ್, 12 ಗ್ರೆನೇಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ವಶಪಡಿಸಿಕೊಂಡ ಶಸ್ತ್ರಾಸ್ತ್ರ-ಮದ್ದುಗುಂಡುಗಳು

ಜಕರೆಜಿನ್ಹೋ- ಇದು ಸುಮಾರು 40,000 ನಿವಾಸಿಗಳಿರುವ ಕೊಳೆಗೇರಿ ಪ್ರದೇಶವಾಗಿದ್ದು, ಬ್ರೆಜಿಲ್‌ನ ಪ್ರಮುಖ ಅಪರಾಧ ಸಂಸ್ಥೆಗಳಲ್ಲಿ ಒಂದಾದ ಕಮಾಂಡೋ ವರ್ಮೆಲ್ಹೋ ಪ್ರಾಬಲ್ಯ ಹೊಂದಿದೆ. ಈ ಗುಂಪಿನ ಪ್ರಧಾನಿ ಕಚೇರಿಗಳಲ್ಲಿ ಜಕರೆಜಿನ್ಹೋ ಕೂಡ ಒಂದಾಗಿದೆ ಎಂದು ಪೊಲೀಸರು ಹೇಳುತ್ತಾರೆ.

ಪೊಲೀಸ್​ ಕಾರ್ಯಾಚರಣೆ ವೇಳೆ ಗುಂಪು ಸೇರಿದ ಜನ

ರೈಲುಗಳನ್ನು ಹೈಜಾಕ್​​ ಮಾಡಿ, ಅಪರಾಧ ಚಟುವಟಿಕೆಗಳಿಗೆ ದೂಡಲು ಹದಿಹರೆಯದವರನ್ನು ಮಾದಕವಸ್ತು ಕಳ್ಳಸಾಗಣೆದಾರ ನೇಮಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಈ ಪ್ರದೇಶದಲ್ಲಿ ನಿನ್ನೆ ಮಾನವ ಹಕ್ಕುಗಳ ಆಯೋಗದ ಸದಸ್ಯರೊಂದಿಗೆ ಬಂದು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಮಧ್ಯಾಹ್ನದ ವೇಳಗೆ ಸುಮಾರು 50 ಜನರ ಗುಂಪು ನಮಗೆ ನ್ಯಾಯ ಬೇಕೆಂದು ಘೋಷಣೆ ಕೂಗಲು ಶುರು ಮಾಡಿದ್ದಾರೆ. ಕೆಲವರು ಶಸ್ತ್ರಸಜ್ಜಿತರಾಗಿ ದಾಳಿಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಕೊಳೆಗೇರಿ ಪ್ರದೇಶದ ಮೇಲೆ ಪೊಲೀಸರ ಕಾರ್ಯಾಚರಣೆ

ABOUT THE AUTHOR

...view details