ಕರ್ನಾಟಕ

karnataka

ETV Bharat / international

ಭಾರಿ ಮಳೆಗೆ ಬ್ರೆಜಿಲ್​ ತತ್ತರ.. ಪ್ರವಾಹ, ಭೂಕುಸಿತಕ್ಕೆ 18 ಜನ ಬಲಿ!

ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಕನಿಷ್ಠ 18 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

18 killed in heavy rains in Sao Paulo  Governor Joao Doria  heavy rains Brazilian state of Sao Paulo  ಸಾವೊ ಪಾಲೊದಲ್ಲಿ ಭಾರೀ ಮಳೆಯಿಂದಾಗಿ 18 ಜನ ಸಾವು  ಗವರ್ನರ್ ಜೊವೊ ಡೋರಿಯಾ  ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದಲ್ಲಿ ಭಾರೀ ಮಳೆ
ಭಾರೀ ಮಳೆಗೆ ಬ್ರೇಜಿಲ್​ ತತ್ತರ

By

Published : Jan 31, 2022, 7:50 AM IST

ಸಾವೊಪಾಲೊ:ಬ್ರೆಜಿಲ್‌ನ ಸಾವೊ ಪಾಲೊ ರಾಜ್ಯದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಜೊವೊ ಡೋರಿಯಾ ವರದಿ ಮಾಡಿದ್ದಾರೆ.

ಭಾರಿ ಮಳೆಯಿಂದ ಉಂಟಾದ ಹಾನಿಯಿಂದಾಗಿ ನಾನು ಬಹಳ ದುಃಖತಪ್ತನಾಗಿದ್ದೇನೆ. ಈ ಮಳೆಯಿಂದಾಗಿ ಸುಮಾರು 18 ಜನರು ಸಾವನ್ನಪ್ಪಿದ್ದಾರೆ. ನಾವು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದೇವೆ. ಸಂತ್ರಸ್ತರಿಗೆ ಸಹಾಯ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಡೋರಿಯಾ ಹೇಳಿದರು.

ಓದಿ:ಯೋಗಿ ಆದಿತ್ಯನಾಥ್‌ ನಿಂದಿಸಿದ, ನಕಲಿ ಸಹಿ ಕರಪತ್ರ ಹಂಚಿದ ಆರೋಪ: ಪತ್ರಕರ್ತನ ಬಂಧನ

ಈ ವಾರಾಂತ್ಯದಲ್ಲಿ ಚಂಡಮಾರುತದಿಂದ ಸಾವನ್ನಪ್ಪಿದ 18 ಜನರಲ್ಲಿ ಏಳು ಮಕ್ಕಳು ಸೇರಿದ್ದಾರೆ. ಸುಮಾರು 500 ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ಹೇಳಿದೆ.

ಸಾವೊಪಾಲೊದ ಮಹಾನಗರ ಪ್ರದೇಶದಲ್ಲಿ ಫ್ರಾನ್ಸಿಸ್ಕೊ ​​ಮೊರಾಟೊ, ಫ್ರಾಂಕೊ ಡ ರೊಚಾ, ವರ್ಜಿಯಾ ಪಾಲಿಸ್ಟಾ, ಅರುಜಾ ಮತ್ತು ಎಂಬು ದಾಸ್ ಆರ್ಟೆಸ್ ಮುನ್ಸಿಪಾಲಿಟಿಗಳಲ್ಲಿ ಸಾವುಗಳು ದಾಖಲಾಗಿವೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details