ಕರ್ನಾಟಕ

karnataka

ETV Bharat / international

ಜೈಲಿನಲ್ಲಿ ಹಿಂಸಾತ್ಮಾಕ ಘರ್ಷಣೆ; 24 ಕೈದಿಗಳ ಸಾವು, 48 ಮಂದಿಗೆ ಗಾಯ - ಅರಿಯಟ್‌ ಜೈಲು

ಈಕ್ವೆಡಾರ್‌ನ ಗುವಾಕ್ವಿಲ್‌ನಲ್ಲಿರುವ ಅರಿಯಟ್‌ ಜೈಲಿನಲ್ಲಿ ರಕ್ತಪಾತವಾಗಿದ್ದು, ಹಿಂಸಾತಾಕ್ಮ ಘರ್ಷಣೆಯಲ್ಲಿ 24 ಕೈದಿಗಳು ಮೃತಪಟ್ಟರೆ, 48 ಮಂದಿ ಗಾಯಗೂಂಡಿದ್ದಾರೆಂದು ವರದಿಯಾಗಿದೆ.

Ariot in a penitentiary in coastal city of Guayaquil killed 24 inmates and injured 48 more
ಈಕ್ವೆಡಾರ್‌ ಜೈಲಿನಲ್ಲಿ ಹಿಂಸಾತ್ಮಾಕ ಘರ್ಷಣೆ; 24 ಕೈದಿಗಳ ಸಾವು, 48 ಮಂದಿಗೆ ಗಾಯ

By

Published : Sep 29, 2021, 7:03 AM IST

ಈಕ್ವೆಡಾರ್‌: ಕರಾವಳಿ ನಗರ ಗುವಾಕ್ವಿಲ್‌ನಲ್ಲಿರುವ ಅರಿಯಟ್‌ ಜೈಲಿನಲ್ಲಿ ನಡೆದ ಹಿಂಸಾತಾಕ್ಮ ಘರ್ಷಣೆಯಲ್ಲಿ 24 ಕೈದಿಗಳ ಹತ್ಯೆಯಾಗಿದ್ದು, 48 ಮಂದಿ ಗಾಯಗೂಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಸಂಘರ್ಷದ ಬಳಿಕ ಪೋಲಿಸ್ ಹಾಗೂ ಸೇನೆ 5 ಗಂಟೆಗಳ ಕಾರ್ಯಾಚರಣೆ ಬಳಿಕ ಗುವಾಕ್ವಿಲ್ ಪ್ರಾದೇಶಿಕ ಜೈಲಿನಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಮಂಗಳವಾರ ನಡೆದಿರುವ ಈ ಹಿಂಸಾಚಾರದಲ್ಲಿ ಗನ್‌, ಚಾಕು ಹಾಗೂ ಸ್ಫೋಟಗಳನ್ನು ಬಳಸಲಾಗಿದೆ. ಜೈಲಿನಲ್ಲಿದ್ದ ಲಾಸ್ ಲೋಬೋಸ್ ಹಾಗೂ ಲಾಸ್ ಚೊನೆರೋಸ್ ಎಂಬ ತಂಡಗಳ ಈ ಗಲಾಟೆ ನಡೆದಿದೆ ಎಂದು ಜೈಲಾಧಿಕಾರಿಗಳು ವಿವರಿಸಿದ್ದಾರೆ.

ಜುಲೈನಲ್ಲಿ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರು ಈಕ್ವೆಡಾರ್‌ನ ಜೈಲು ವ್ಯವಸ್ಥೆಯಲ್ಲಿ ತುರ್ತು ಪರಿಸ್ಥಿತಿ ಹೇರಿದ್ರು. ಹಲವಾರು ಹಿಂಸಾತ್ಮಕ ಘಟನೆಗಳಲ್ಲಿ 100 ಕ್ಕೂ ಹೆಚ್ಚು ಕೈದಿಗಳನ್ನು ಹತ್ಯೆ ಮಾಡಲಾಗಿದೆ. ಫೆಬ್ರವರಿಯಲ್ಲಿ ದೇಶದ ಮೂರು ಕಾರಾಗೃಹಗಳಲ್ಲಿ ಏಕಕಾಲದಲ್ಲಿ ನಡೆದ ಗಲಭೆಯಲ್ಲಿ 79 ಕೈದಿಗಳು ಸಾವನ್ನಪ್ಪಿದ್ದರು. ಸೆಪ್ಟೆಂಬರ್‌ನಲ್ಲಿ ಒಂದು ಜೈಲಿನ ಮೇಲೆ ಡ್ರೋನ್‌ಗಳಿಂದ ದಾಳಿ ಮಾಡಲಾಗಿತ್ತು. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ABOUT THE AUTHOR

...view details