ನ್ಯಾಶ್ವಿಲ್ಲೆ (ಯು. ಎಸ್): ನಾಯಿಯೊಂದರ ಕುರಿತು ಪ್ರಾರಂಭವಾದ ಜಗಳವು ಗುಂಡಿನ ಚಕಮಕಿಯೊಂದಿಗೆ ಕೊನೆಗೊಂಡಿದೆ. ಘಟನೆಯಲ್ಲಿ ಎಂಟು ಜನರು ಗಾಯೊಂಡಿದ್ದಾರೆ.
ನಾಯಿ ವಿಚಾರದಲ್ಲಿ ಶುರುವಾದ ಜಗಳ ಗುಂಡಿನ ಚಕಮಕಿಯಲ್ಲಿ ಅಂತ್ಯ! - ಯುನೈಟೆಡ್ ಸ್ಟೇಟ್ಸ್ನ ನ್ಯಾಶ್ವಿಲ್ಲೆಯಲ್ಲಿ ಗುಂಡಿನ ಚಕಮಕಿ
ನಾಯಿ ವಿಚಾರಕ್ಕೆ ಪ್ರಾರಂಭವಾದ ಜಗಳ ಅತಿಕರೇಕಕ್ಕೆ ತಿರುಗಿ ಗುಂಡಿನ ಚಕಮಕಿ ನಡೆದಿದೆ. ಭಾನುವಾರ ಮಧ್ಯರಾತ್ರಿ 1 ಗಂಟೆಯ ಸಮಯಕ್ಕೆ ಅಮರಿಕದಲ್ಲಿ ಈ ಘಟನೆ ನಡೆದಿದ್ದು, ಎಂಟು ಜನರು ಗಾಯೊಂಡಿದ್ದಾರೆ.
shootout
ಯುನೈಟೆಡ್ ಸ್ಟೇಟ್ಸ್ನ ನ್ಯಾಶ್ವಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಶಂಕಿತರನ್ನು ಹುಡುಕುತ್ತಿದ್ದೇವೆ ಎಂದು ನ್ಯಾಶ್ವಿಲ್ಲೆ ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ 1 ಗಂಟೆ ಸಮಯಕ್ಕೆ ಗುಂಡಿನ ಚಕಮಕಿ ನಡೆದಿದ್ದು, ಯಾವುದೇ ಗಾಯಗಳು ಮಾರಣಾಂತಿಕವಾಗಿಲ್ಲ. ಘಟನಾ ಸ್ಥಳದಿಂದ ಬಂದೂಕವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.