ನ್ಯೂಯಾರ್ಕ್: ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಪರಿಣಾಮ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಎಲ್ಲೆಡೆ ಜಾಗ್ರತಿ ಮೂಡಿಸಲಾಗುತ್ತಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕೈಗಳನ್ನು ಹೇಗೆ ತೊಳೆದುಕೊಳ್ಳಬೇಕು ಎಂದು ಸಲಹೆ ನೀಡಿದೆ.
ಕೈಗಳನ್ನು ಹೇಗೆ ತೊಳೆಯಬೇಕು ಗೊತ್ತಾ? WHO ಕೊಟ್ಟ ಮಾಹಿತಿ ಇಲ್ಲಿದೆ ನೋಡಿ.. - ಕೈ ತೊಳೆದುಕೊಳ್ಳುವ ಬಗ್ಗೆ who ಮಾಹಿತಿ
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರತಿನಿತ್ಯ ಹೇಗೆ ಕೈ ತೊಳೆದುಕೊಳ್ಳಬೇಕು ಎಂದು ಮಾಹಿತಿ ನೀಡಿದೆ.
ಕೈಗಳನ್ನು ಹೇಗೆ ತೊಳೆಯಬೇಕು ಗೊತ್ತಾ?
ಕೈ ತೊಳೆದುಕೊಳ್ಳುವುದು ನಮ್ಮ ದೇಹವನ್ನು ಶುಭ್ರವಾಗಿಡುವುದು ವೈಯಕ್ತಿಕ ಸ್ವಚ್ಛತೆಯ ಒಂದು ಭಾಗ. 20 ರಿಂದ 30 ಸೆಕೆಂಡುಗಳಲ್ಲಿ ಕೈ ತೊಳೆದುಕೊಳ್ಳುವ ಬಗ್ಗೆ WHO ಮಾಹಿತಿ ನೀಡಿದೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ, #SafeHands challenge ಪ್ರಾರಂಭಿಸಿದ್ದು, ನೀವು ಕೂಡ ಕೈ ತೊಳೆದುಕೊಂಡು ನಿಮ್ಮ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಳ್ಳಬಹುದು ಎಂದಿದೆ.