ಸ್ಯಾನ್ ಫ್ರಾನ್ಸಿಸ್ಕೋ: ಐಫೋನ್ ಇತ್ತೀಚಿಗೆ ತನ್ನ ಉತ್ಪನ್ನಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ಬಿಡುಗಡೆ ಮಾಡಲಾಗಿದ್ದ ಐ ಪ್ಯಾಡ್ ಏರ್ ಅನ್ನು ಒಎಲ್ಇಡಿ (ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಯೋಡ್) ಡಿಸ್ಪ್ಲೆ ಗಳಾಗಿ ಮುಂದಿನ ವರ್ಷದ ದ್ವಿತಿಯಾರ್ಧದೊಳಗೆ ಪರಿವರ್ತನೆ ಮಾಡಲಾಗುತ್ತದೆ ಎಂದು ಆ್ಯಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಹೇಳಿದ್ದಾರೆ.
ಆ್ಯಪಲ್ ಐಪಾಡ್ನಲ್ಲಿ ಈಗಾಗಲೇ ಮಿನಿ- ಎಲ್ಇಡಿ ಡಿಸ್ಪ್ಲೆ ಇದ್ದು, 2022ರಲ್ಲಿ ಈ ಡಿಸ್ಪ್ಲೇಯನ್ನು ಒಎಲ್ಇಡಿ ಆಗಿ ಬದಲಾವಣೆ ಮಾಡಿದಾಗಲೂ ಕೂಡಾ ಮಿನಿ- ಎಲ್ಇಡಿ ಡಿಸ್ಪ್ಲೆ ತನ್ನ ಟ್ಯಾಬ್ಲೆಟ್ಗಳಿಗೆ ಮಾತ್ರವೇ ಮೀಸಲಾಗಿದ್ದು, ಎಕ್ಸ್ಕ್ಲೂಸಿವ್ ಆಗಿರಲಿದೆ ಎಂಬ ನಂಬಿಕೆಯಿದೆ ಎಂದು ಮ್ಯಾಕ್ ರೂಮರ್ಸ್ ಹೇಳಿಕೆಯನ್ನು ಮಿಂಗ್-ಚಿ ಕುವೊ ಉಲ್ಲೇಖಿಸಿದ್ದಾರೆ.
ಆ್ಯಪಲ್ ಉತ್ಪನ್ನಗಳಲ್ಲಿ ಪ್ರಸ್ತುತ ಆಪಲ್ ವಾಚ್ ಮತ್ತು ಐಫೋನ್‌ನಲ್ಲಿ ಒಎಲ್ಇಡಿ ಡಿಸ್ಪ್ಲೆಗಳನ್ನು ಬಳಸುತ್ತಿದ್ದರೆ, ಮ್ಯಾಕ್ಸ್ ಮತ್ತು ಐಪ್ಯಾಡ್ಗಳು ಇನ್ನೂ ಹಳೆಯ ಎಲ್‌ಸಿಡಿ ತಂತ್ರಜ್ಞಾನವನ್ನೇ ಬಳಸಿಕೊಳ್ಳುತ್ತಿದೆ.