ವಾಷಿಂಗ್ಟನ್:ಅಮೆರಿಕದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ ಅವರು, ಕೊರೊನಾ ವೈರಸ್ (ಕೋವಿಡ್ -19) ಹರಡುವಿಕೆ ತಡೆಯಲು ತಕ್ಷಣದ ಹೆಜ್ಜೆಯಾಗಿ ಭಾರತದಲ್ಲಿ ಕೆಲವು ವಾರಗಳವರೆಗೆ ಲಾಕ್‌ಡೌನ್ ಮಾಡಲು ಸೂಚಿಸಿದ್ದಾರೆ.
ಫೌಸಿ, ಭಾರತದ ಮಾಧ್ಯಮಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ತಕ್ಷಣವೇ ಮತ್ತೊಂದು ಗಮನ ಕೊಡಬೇಕಾದ ಪ್ರಮುಖ ಸಂಗತಿ ಎಂದರೇ ಆಮ್ಲಜನಕ, ಔಷಧ, ಪಿಪಿಇಗಳನ್ನು ಪೂರೈಸುವುದು. ಬಿಕ್ಕಟ್ಟಿನ ಪ್ರಮಾಣವನ್ನು ನೋಡುತ್ತಾ, ಭಾರತವು ಮತ್ತೊಂದೆಡೆ ಬಿಕ್ಕಟ್ಟು ನಿರ್ವಹಣೆ ತಂಡವನ್ನು ಒಟ್ಟುಗೂಡಿಸುವತ್ತ ಗಮನಹರಿಸಬೇಕು ಎಂದರು.
ಯಾವುದೇ ಸರ್ಕಾರವನ್ನು ಹೆಸರಿಸದೇ, ವಿಜಯವನ್ನು ಅಕಾಲಿಕವಾಗಿ ಘೋಷಿಸಲಾಗಿದೆ ಎಂದರು. ಸರಿ, ನೀವು ನಿಜವಾಗಿಯೂ ಮಾಡಬೇಕಾದ ಕೆಲಸವೆಂದರೆ, ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ, ದೇಶವನ್ನು ತಾತ್ಕಾಲಿಕವಾಗಿ ಲಾಕ್‌ಡೌನ್ ಮಾಡಿ. ಇದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಸಮಯ ಮೀರಲು ಬಯಸಿದರೆ, ನಾನು ಹೇಳಿದ ವಿಷಯಕ್ಕೆ ಹಿಂತಿರುಗಿ. ತಕ್ಷಣ, ಮಧ್ಯಂತರ ಮತ್ತು ದೀರ್ಘ ಶ್ರೇಣಿಯ ವೈರಸ್ ನಿಯಂತ್ರಣ ಒಳಗೊಂಡಿರುವ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸೂಚಿಸಿದ್ದಾರೆ.