ಕರ್ನಾಟಕ

karnataka

ETV Bharat / international

ಭಾರತದಲ್ಲಿ ಇನ್ನೊಂದು ದಾಳಿಯಾದ್ರೆ ಪಾಕ್​ ಗ್ರಹಚಾರ ನೆಟ್ಟಗಿರಲ್ಲ: ಅಮೆರಿಕ ಎಚ್ಚರಿಕೆ - ಅಮೆರಿಕ

ಪಾಕಿಸ್ತಾನ ಮತ್ತೆ ತನ್ನ ಬಾಲ ಬಿಚ್ಚಿದಲ್ಲಿ ಭಾರತ ಅತ್ಯಂತ ಪರಿಣಾಮಕಾರಿ ಪ್ರತ್ಯುತ್ತರ ನೀಡೋದು ನಿಶ್ಚಿತ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ಅಮೆರಿಕ ರವಾನಿಸಿದೆ.

ಡೊನಾಲ್ಡ್ ಟ್ರಂಪ್

By

Published : Mar 21, 2019, 10:11 AM IST

ವಾಷಿಂಗ್ಟನ್​: ಇನ್ನೊಂದು ಉಗ್ರ ದಾಳಿ ಭಾರತದಲ್ಲಿ ನಡೆದದ್ದೇ ಆದಲ್ಲಿ ಪಾಕಿಸ್ತಾನ ನಿಜಕ್ಕೂ ಆ ಬಳಿಕ ಅತ್ಯಂತ ಕಷ್ಟಕರ ದಿನಗಳನ್ನು ಎದುರಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಉಗ್ರರ ಶಮನ ಮಾಡುವ ನಿಟ್ಟಿನಲ್ಲಿ ಪಾಕ್ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವುದು ನಾವು ಗಮನಿಸಿಬೇಕಿದೆ. ಇಲ್ಲವಾದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಕಾಣಿಸಿಕೊಳ್ಳುತ್ತವೆ ಎಂದು ಅಮೆರಿಕದ ಶ್ವೇತಭವನವು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಪಾಕಿಸ್ತಾನ ಮತ್ತೆ ತನ್ನ ಬಾಲ ಬಿಚ್ಚಿದಲ್ಲಿ ಭಾರತ ಅತ್ಯಂತ ಪರಿಣಾಮಕಾರಿ ಪ್ರತ್ಯುತ್ತರ ನೀಡೋದು ನಿಶ್ಚಿತ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ಅಮೆರಿಕ ರವಾನಿಸಿದೆ.

ಉಗ್ರರ ನಿರ್ಮೂಲನೆಯನ್ನು ಪಾಕಿಸ್ತಾನ ಮಾಡಲಿದೆಯೇ ಎನ್ನುವುದಕ್ಕೆ, ಈಗಲೇ ಅಂತಿಮ ತೀರ್ಮಾನಕ್ಕೆ ಬರುವುದು ಕಷ್ಟ ಎಂದು ಪ್ರಕಟಣೆ ಹೇಳಿದೆ.

ABOUT THE AUTHOR

...view details