ವಾಷಿಂಗ್ಟನ್:ಭಾರತದಲ್ಲಿ ದೀಪಗಳ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಈ ನಡುವೆ ಅಮೆರಿಕದಲ್ಲೂ ದೀಪಾವಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಶುಭಾಶಯಗಳ ಮಹಾಪೂರವನ್ನೇ ಹರಿಸಲಾಗುತ್ತಿದೆ. ಅಮೆರಿಕದ ಜನಪ್ರಿಯ ಗಾಯಕಿ ಮೇರಿ ಮಿಲ್ಬೆನ್, 'ಓಂ ಜೈ ಜಗದೀಶ್ ಹರೇ' ಹಾಡನ್ನು ಬಿಡುಗಡೆ ಮಾಡಿ ದೀಪಗಳ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
'ಓಂ ಜೈ ಜಗದೀಶ್ ಹರೇ'.. ಅಮೆರಿಕ ಗಾಯಕಿಯಿಂದ ಭಾರತೀಯರಿಗೆ ದೀಪಾವಳಿ ಶುಭಾಶಯ - ಓಂ ಜೈ ಜಗದೀಶ್ ಹರೇ ಹಾಡು ಹಾಡಿದ ಅಮೆರಿಕ ಗಾಯಕಿ
ಅಮೆರಿಕದ ಜನಪ್ರಿಯ ಗಾಯಕಿ ಮೇರಿ ಮಿಲ್ಬೆನ್, 'ಓಂ ಜೈ ಜಗದೀಶ್ ಹರೇ' ಹಾಡನ್ನು ಬಿಡುಗಡೆ ಮಾಡಿ ದೀಪಗಳ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
"ಓಂ ಜೈ ಜಗದೀಶ್ ಹರೇ", ದೀಪಾವಳಿಯ ಸಮಯದಲ್ಲಿ ಭಾರತೀಯರು ಹಾಡುವ ಸುಂದರವಾದ ಗೀತೆ. ಇದು ಪೂಜೆ ಮತ್ತು ಆಚರಣೆಯ ಹಾಡಾಗಿದ್ದು, ಈ ಮೂಲಕ ಅರ್ಥಪೂರ್ಣ ದೀಪಾವಳಿ ಆಚರಿಸಲಾಗುತ್ತದೆ. ಹೀಗಾಗಿ ಮಿಲ್ಬೆನ್ ದೀಪಾವಳಿಗೆ ಈ ಹಾಡನ್ನು ಪ್ರಸ್ತುತ ಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, 'ಈ ಹಾಡು ತಮ್ಮನ್ನ ಚಲನಶೀಲರನ್ನಾಗಿ ಮಾಡಿದ್ದು, ನನ್ನ ಚೈತನ್ಯವನ್ನು ಸದಾ ಸ್ಪರ್ಶಿಸುತ್ತದೆ. ಸದಾ ಉತ್ಸಾಹದಿಂದ ಇರಲು ಪ್ರಚೋದಿಸುತ್ತದೆ' ಎಂದು ಗುಣಗಾನ ಮಾಡಿದ್ದಾರೆ.
‘‘ಓಂ ಜೈ ಜಗದೀಶ್ ಹರೇ" ಹಾಡಿಗೆ ಕೆನಡಿಯನ್ ಸ್ಕ್ರೀನ್ ಪ್ರಶಸ್ತಿ ಮತ್ತು ಗ್ರ್ಯಾಮಿ ನಾಮನಿರ್ದೇಶಿತ ಸಂಯೋಜಕ ಡ್ಯಾರಿಲ್ ಬೆನೆಟ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸೋನಿ ಪಿಕ್ಚರ್ಸ್ ನಿರ್ಮಾಪಕ ಟಿಮ್ ಡೇವಿಸ್, ಪ್ರಶಸ್ತಿ ವಿಜೇತ ಇಂಜಿನಿಯರ್ (ಮಿಕ್ಸರ್) ಜಾರ್ಜ್ ವಿವೊ, ಕಾರ್ಯನಿರ್ವಾಹಕ ನಿರ್ದೇಶಕರಾದ ಅರಿಜೋನಾ ಮೂಲದ ನಿರ್ಮಾಣ ಸಂಸ್ಥೆ ಆಂಬಿಯೆಂಟ್ ಸ್ಕೈಸ್ನ ಜಾನ್ ಶೌಸ್ ಮತ್ತು ಟ್ರೆಂಟ್ ಮಾಸ್ಸಿ ಮತ್ತು ದೀನಾ ಮಾಲಿ ಗೀತೆ ಪ್ರಸ್ತುತಿ ವೇಳೆ ಹಾಜರಿದ್ದರು.