ಕರ್ನಾಟಕ

karnataka

By

Published : Dec 11, 2020, 5:13 AM IST

Updated : Dec 11, 2020, 4:20 PM IST

ETV Bharat / international

ಫೈಝರ್​​ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲು ಅಮೆರಿಕದ ತಜ್ಞರ ಪರಿಗಣನೆ

ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್​ನ (ಎಫ್‌ಡಿಎ)ತಜ್ಞರ ಸ್ವತಂತ್ರ ಸಮಿತಿಯು ದಿನದ ಕೊನೆಯಲ್ಲಿ ಮತದಾನವನ್ನು ನಡೆಸುವುದಿಲ್ಲ. ಫೈಝರ್ ಲಸಿಕೆಯ ತುರ್ತು ಬಳಕೆ ದೃಢೀಕರಣವನ್ನು (ಇಯುಎ) ನೀಡಬೇಕೆ ಎಂದು ಅಮೆರಿಕ ನಿಯಂತ್ರಕವು ನಿರ್ಧರಿಸುತ್ತದೆ ಎಂದಿದೆ.

ಫಿಜರ್
Pfizer

ವಾಷಿಂಗ್ಟನ್: ಫೈಝರ್-ಬಯೋಎನ್‌ಟೆಕ್‌ನ ಕೋವಿಡ್ -19 ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಬೇಕೇ ಅಥವಾ ಸಾಮೂಹಿಕವಾಗಿ ರೋಗನಿರೋಧಕ ಶಕ್ತಿಯೊಂದಿಗೆ ಮುಂದುವರಿಯಬೇಕು ಎಂಬುದರ ಬಗ್ಗೆ ತೀರ್ಮಾನಿಸಲು ಅಮೆರಿಕದ ತಜ್ಞರು ಗುರುವಾರ ಸಭೆ ಸೇರಿದರು.

ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್​ನ (ಎಫ್‌ಡಿಎ) ತಜ್ಞರ ಸ್ವತಂತ್ರ ಸಮಿತಿಯು ದಿನದ ಕೊನೆಯಲ್ಲಿ ಮತದಾನವನ್ನು ನಡೆಸುವುದಿಲ್ಲ. ತುರ್ತು ಬಳಕೆಯ ದೃಢೀಕರಣವನ್ನು (ಇಯುಎ) ನೀಡಬೇಕೆ ಎಂದು ಅಮೆರಿಕ ನಿಯಂತ್ರಕವು ನಿರ್ಧರಿಸುತ್ತದೆ ಎಂದಿದೆ.

ಚೀನಾದ ಸೈನೋಫಾರ್ಮ್​ ಲಸಿಕೆ ಶೇ. 86ರಷ್ಟು ಪರಿಣಾಮಕಾರಿ: ಯುಎಇ

ಲಸಿಕೆಯನ್ನು ತುರ್ತು ಬಳಕೆಗೆ ಅನುಮತಿಯ ಪರ ವಾದಗಳು ವ್ಯಾಪಕವಾಗಿ ಇದೆ ಎಂಬುದು ತೋರುತ್ತದೆ. ಈಗಾಗಲೇ ಬ್ರಿಟನ್ ಮತ್ತು ಕೆನಡಾದಿಂದ ಹಸಿರು ನಿಶಾನೆ ತೋರಲಾಗಿದೆ. ಲಸಿಕೆಯ ಬೃಹತ್ ಕ್ಲಿನಿಕಲ್ ಪ್ರಯೋಗದ ಪೂರ್ಣ ಫಲಿತಾಂಶಗಳನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಗುರುವಾರ ಪ್ರಕಟಿಸಲಾಗಿದೆ. ಇದು ಲಸಿಕೆ ಬಗೆಗಿನ ಮತ್ತೊಂದು ಪ್ರಮುಖ ಮೈಲುಗಲ್ಲಾಗಿದೆ.

Last Updated : Dec 11, 2020, 4:20 PM IST

ABOUT THE AUTHOR

...view details