ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಮೊದಲ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಹಣದುಬ್ಬರ ಮತ್ತು ಕೊರೊನಾ ವಿರುಧ್ದ ಹೋರಾಡಲು ಕಾರ್ಯಯೋಜನೆ ರೂಪಿಸುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನೂ ಪ್ರಮುಖ ಅಂಶ ಎಂದರೆ, ರಷ್ಯಾ ದಾಳಿಗೆ ಬೆಲೆ ತೆರುವಂತೆಯೂ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಉಕ್ರೇನಿಯನ್ ರಕ್ಷಕರ ಶೌರ್ಯ ಮತ್ತು , ಜೊತೆಗೆ ಉಕ್ರೇನಿಯನ್ ಮಿಲಿಟರಿಗೆ ಬಲ ತುಂಬಲು ಮತ್ತು ನಿರ್ಬಂಧಗಳ ಮೂಲಕ ರಷ್ಯಾದ ಆರ್ಥಿಕತೆ ದುರ್ಬಲಗೊಳಿಸಲು ಬೇಕಾದ ಕ್ರಮವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರ ಆಕ್ರಮಣವು ಸರಿಯಲ್ಲ ಎಂದೂ ಎಚ್ಚರಿಸಿದ್ದಾರೆ. ಈ ಮೂಲಕ ಯಾವುದೇ ಯುಧ್ಧಗಳನ್ನು ಕೈಗೊಳ್ಳದೇ ಈ ಬಗ್ಗೆ ಉತ್ತರ ನೀಡಲು ಬೈಡನ್ ನಿರ್ಧರಿಸಿದ್ದಾರೆ. ನಮ್ಮ ಇತಿಹಾಸದ ಉದ್ದಕ್ಕೂ ನಾವು ನೋಡಿದ್ದೇವೆ. ಸರ್ವಾಧಿಕಾರಿಗಳು ಆಕ್ರಮಣಶೀಲತೆಗೆ ಬೆಲೆ ಕೊಟ್ಟಾಗ ಅವರು ಹೆಚ್ಚು ಅವ್ಯವಸ್ಥೆಯನ್ನು ಉಂಟುಮಾಡಿದ್ದಾರೆ ಮತ್ತು ಅದಕ್ಕೆ ಬೆಲೆ ತೆತ್ತಿದ್ದಾರೆ ಎಂದು ಬೈಡನ್ ಹೇಳಿದ್ದಾರೆ.
ಕೋವಿಡ್ ಬಹಳಷ್ಟು ಕಾಟ ಕೊಟ್ಟಿದೆ:ಅಮೆರಿಕ ಮತ್ತು ಜಗತ್ತಿಗೆ ಬೆದರಿಕೆಗಳು ಹೆಚ್ಚುತ್ತಲೇ ಇವೆ. ಕೋವಿಡ್ ಸಾಂಕ್ರಾಮಿಕವು ಕುಟುಂಬಗಳನ್ನು ಮತ್ತು ದೇಶದ ಆರ್ಥಿಕತೆಯನ್ನು ಹಿಮ್ಮೆಟ್ಟಿಸಿದೆ. ಇದರಿಂದ ಹೊರಬರಲು ಅಮೆರಿಕವು ಉತ್ಪಾದನಾ ಸಾಮರ್ಥ್ಯದಲ್ಲಿ ಮರುಹೂಡಿಕೆ ಮಾಡುವ ಮೂಲಕ ಹಣದುಬ್ಬರವನ್ನು ಪರಿಹರಿಸುವ ಯೋಜನೆಗಳನ್ನು ರೂಪಿಸಲು ಬೈಡನ್ ನಿರ್ಧರಿಸಿದ್ದಾರೆ, ಪೂರೈಕೆ ಮತ್ತು ಬೇಡಿಕೆಯ ಸರಪಳಿಯನ್ನು ವೇಗಗೊಳಿಸುವುದು. ಮತ್ತು ಕಾರ್ಮಿಕರ ಮೇಲಿನ ಮಕ್ಕಳ ಆರೈಕೆ ಮತ್ತು ಹಿರಿಯ ಆರೈಕೆಯ ಹೊರೆಯನ್ನು ಕಡಿಮೆ ಮಾಡುವುದು ಪ್ರಮುಖವಾಗಿದೆ ಎಂದು ಹೇಳಿದ್ದಾರೆ. ಅಮೆರಿಕದ ಉಂಟಾಗಿರುವ ಹಣದುಬ್ಬರವನ್ನು ತಡೆಯಲು ಜನರಲ್ಲಿ ವೆಚ್ಚವನ್ನು ಕಡಿಮೆ ಮಾಡುವಂತೆ ಕೋರಿದ್ದಾರೆ.