ಕರ್ನಾಟಕ

karnataka

ETV Bharat / international

ಜಾಗತಿಕ ಉಗ್ರ ಹಫೀಜ್ ಸಯೀದ್ ಬೆನ್ನಿಗೆ ನಿಂತ ಪಾಕ್​..!

ವಿಶ್ವಸಂಸ್ಥೆ ಈಗಾಗಲೇ ಹಫೀಜ್ ಸಯೀದ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಿ ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿತ್ತು. ಇದೀಗ ಆತನ ವೈಯಕ್ತಿಕ ಖರ್ಚಿಗೆ ಬ್ಯಾಂಕ್ ಖಾತೆಯನ್ನು ಬಳಸಲು ಅನುಮತಿ ನೀಡುವಂತೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಅಂಗಲಾಚಿದೆ.

By

Published : Sep 26, 2019, 10:29 AM IST

ಜಾಗತಿಕ ಉಗ್ರ ಹಫೀಜ್ ಸಯೀದ್​

ನ್ಯೂಯಾರ್ಕ್​:ಉಗ್ರಪೋಷಕ ರಾಷ್ಟ್ರ ಪಾಕಿಸ್ತಾನ ಸದ್ಯ ಜಮಾತ್​-ಉದ್​-ದವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್​​ ಸಹಾಯಕ್ಕೆ ಪಾಕಿಸ್ತಾನ ವಿಶ್ವಸಂಸ್ಥೆ ಮೊರೆ ಹೋಗಿದೆ.

ವಿಶ್ವಸಂಸ್ಥೆ ಈಗಾಗಲೇ ಹಫೀಜ್ ಸಯೀದ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಿ ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿತ್ತು. ಇದೀಗ ಆತನ ವೈಯಕ್ತಿಕ ಖರ್ಚಿಗೆ ಬ್ಯಾಂಕ್ ಖಾತೆಯನ್ನು ಬಳಸಲು ಅನುಮತಿ ನೀಡುವಂತೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಅಂಗಲಾಚಿದೆ.

ಸದ್ಯ ಪಾಕಿಸ್ತಾನದ ಮನವಿಗೆ ವಿಶ್ವಸಂಸ್ಥೆ ಸಮ್ಮತಿ ಸೂಚಿಸಿದೆ. ಈ ಮೂಲಕ ಪಾಕಿಸ್ತಾನದ ಮನವಿಯಂತೆ ಜಾಗತಿಕ ಉಗ್ರ ಹಫೀಜ್ ಸಯೀದ್ ಒಂದು ಮಿಲಿಯನ್ ಡಾಲರ್ ಹಣವನ್ನು ತನ್ನ ವೈಯಕ್ತಿಕ ಖರ್ಚಿಗೆ ಬ್ಯಾಂಕ್ ಖಾತೆ ಬಳಸಿಕೊಳ್ಳಬಹುದಾಗಿದೆ.

ಭಾರತ ಸೇರಿದಂತೆ ಹಲವು ರಾಷ್ಟ್ರಗಳ ನಿರಂತರ ಒತ್ತಡದ ಬಳಿಕ ವಿಶ್ವಸಂಸ್ಥೆ ಹಫೀಜ್ ಸಯೀದ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಇದಾದ ಬಳಿಕ ಆತ ಹೊಂದಿದ್ದ ಪಾಕ್​ ಕರೆನ್ಸಿ ಮೌಲ್ಯದ 011,50,000(5,18,86,88,911 ರೂ.ಭಾರತೀಯ ಲೆಕ್ಕಾಚಾರದಲ್ಲಿ) ಹಣವನ್ನು ಪಾಕ್ ಸರ್ಕಾರ ಜಪ್ತಿ ಮಾಡಿತ್ತು.

ಪಾಕಿಸ್ತಾನ ಉಗ್ರರ ಪೋಷಣೆಯಲ್ಲಿ ಇನ್ನೂ ಸಕ್ರಿಯವಾಗಿದೆ ಎನ್ನುವ ಕೂಗಿಗೆ ಸದ್ಯದ ಈ ಬೆಳವಣಿಗೆ ಉತ್ತಮ ಉದಾಹರಣೆ. ಜಾಗತಿಕವಾಗಿ ತೀವ್ರ ಒತ್ತಡವಿದ್ದರೂ ಉಗ್ರರ ಬೆಂಬಲಕ್ಕೂ ಪಾಕಿಸ್ತಾನ ಇನ್ನೂ ಮನಸ್ಸು ಮಾಡುತ್ತಿರುವುದು ಮತ್ತೆ ರುಜುವಾತಾಗಿದೆ.

ABOUT THE AUTHOR

...view details