ಡೆಟ್ರಾಯಿಟ್ (ಅಮೆರಿಕ): ವಿಶ್ವದ ಶ್ರೀಮಂತ ವ್ಯಕ್ತಿ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ (Tesla CEO Elon Musk) ಆಸ್ತಿ ಒಂದೇ ದಿನದಲ್ಲಿ ಕುಸಿತ ಕಂಡಿದೆ. ಎಲೆಕ್ಟ್ರಿಕ್ ಕಾರು (Electric Vehicle) ತಯಾರಕರ ಸ್ಟಾಕ್‌ನ ಸುಮಾರು 9,00,000 ಷೇರುಗಳನ್ನು ಮಾರಾಟ ಮಾಡಿದ ಹಿನ್ನೆಲೆ ಈ ಪ್ರಮಾದ ಉಂಟಾಗಿದೆ.
ಟೆಸ್ಲಾ ಕಾರಿನ (Tesla Car) ಶೇ.10ರಷ್ಟು ಷೇರನ್ನು ತೆರಿಗೆ ರೂಪದಲ್ಲಿ ನೀಡಿದ ಪರಿಣಾಮ ಸುಮಾರು 1.1 ಶತಕೋಟಿ ಯುಎಸ್ ಡಾಲರ್ ಸಂಪತ್ತು ಅವರ ಖಾತೆಯಿಂದ ಕರಗಿದಂತಾಗಿದೆ.
ಮಸ್ಕ್ (Elon Mask) ಇನ್ನೂ ಸುಮಾರು 170 ಮಿಲಿಯನ್ ಟೆಸ್ಲಾ ಷೇರುಗಳನ್ನು (Tesla's largest shareholder) ಹೊಂದಿದ್ದಾರೆ. ಡೇಟಾ ಪೂರೈಕೆದಾರ ಫ್ಯಾಕ್ಟ್‌ಸೆಟ್ ಪ್ರಕಾರ, ಮಸ್ಕ್ ಜೂನ್‌ನಲ್ಲಿ ಟೆಸ್ಲಾದ ಅತಿದೊಡ್ಡ ಷೇರುದಾರರಾಗಿದ್ದರು, ಕಂಪನಿಯ ಸುಮಾರು ಶೇ.17ರಷ್ಟು ಷೇರು ಹೊಂದಿದ್ದಾರೆ. ಅವರು ಫೋರ್ಬ್ಸ್ (Forbes) ನಿಯತಕಾಲಿಕೆ ಪ್ರಕಾರ, ಸುಮಾರು 282 ಶತಕೋಟಿ ಯುಎಸ್ ಡಾಲರ್ ಮೌಲ್ಯದ ಆಸ್ತಿ ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ (World's Richest Man).