ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಕೆಲಸ ಮಾಡುತ್ತಿರುವ ಮೂವರು ಗಗನಯಾತ್ರಿಗಳು ಶುಕ್ರವಾರ ಭೂಮಿಗೆ ಹಿಂತಿರುಗಲು ಪಯಣ ಆರಂಭಿಸಿದ್ದಾರೆ.
ನಾಸಾ ಗಗನಯಾತ್ರಿಗಳಾದ ಆಂಡ್ರ್ಯೂ ಮೋರ್ಗಾನ್ ಮತ್ತು ಜೆಸ್ಸಿಕಾ ಮೀಯರ್ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್‌ನ ಒಲೆಗ್ ಸ್ಕ್ರಿಪೋಚ್ಕಾ ಅವರು ಐಎಸ್‌ಎಸ್‌ನಿಂದ ಸೋಯುಜ್ ಎಂಎಸ್ -15 ಬಾಹ್ಯಾಕಾಶ ನೌಕೆಯಲ್ಲಿ 20.53 ಕೇಂದ್ರ ಸಮಯಕ್ಕೆ ಹೊರಟಿದ್ದಾರೆ.