ವಾಷಿಂಗ್ಟನ್:ನಾಳೆ ಹೂಸ್ಟನ್ನಲ್ಲಿ ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾಗವಹಿಸಲಿದ್ದು, ಮರುದಿನವೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಟ್ರಂಪ್ ಭೇಟಿ ಮಾಡಲಿದ್ದಾರೆ.
ಹೌಡಿ ಮೋದಿ ಕಾರ್ಯಕ್ರಮದ ನಂತರ ಪಾಕ್ ಪ್ರಧಾನಿ ಜೊತೆ ಟ್ರಂಪ್ ಮೀಟಿಂಗ್! - ಡೊನಾಲ್ಡ್ ಟ್ರಂಪ್
ಭಾನುವಾರ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿರುವ ಡೊನಾಲ್ಡ್ ಟ್ರಂಪ್ ಸೋಮವಾರ ಪಾಕ್ ಪ್ರಧಾನಿ ಜೊತೆ ಚರ್ಚೆ ನಡೆಸಲಿದ್ದಾರೆ.
74ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ತೆರಳಿದ್ದು, ಇಬ್ಬರು ನಾಯಕರನ್ನ ಡೊನಾಲ್ಡ್ ಟ್ರಂಪ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ನಾಳೆ ಹೂಸ್ಟನ್ಗೆ ಆಗಮಿಸಲಿರುವ ಟ್ರಂಪ್, ’ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿಂದ ಓಹಿಯೋಗೆ ಪ್ರಯಾಣ ಬೆಳಸಲಿರುವ ಟ್ರಂಪ್ ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿ ಮಾಡಲಿದ್ದಾರೆ. ನಂತರ ಸೋಮವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಭೇಟಿ ಮಾಡಲಿದ್ದಾರೆ. ಇನ್ನು ಮಂಗಳವಾರ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.