ವಾಷಿಂಗ್ಟನ್, ಅಮೆರಿಕ :ಅಫ್ಘಾನಿಸ್ತಾನವನ್ನು ಪುನರ್ ನಿರ್ಮಿಸುವುದು ಅಮೆರಿಕದ ಜವಾಬ್ದಾರಿಯಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಗುರುವಾರ ಸ್ಪಷ್ಟನೆ ನೀಡಿದ್ದು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಆಫ್ಘನ್ ನಾಯಕರನ್ನು ಒತ್ತಾಯಿಸಿದ್ದಾರೆ.
ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೈಡನ್, ಅಫ್ಘಾನಿಸ್ತಾನದಲ್ಲಿ ಅಮೆರಿಕದ ವಿರುದ್ಧದ ಹಿತಾಸಕ್ತಿಗಳನ್ನು ಹತ್ತಿಕ್ಕುವುದು ಮತ್ತು ಬಿನ್ ಲಾಡೆನ್ ಅಂತ್ಯ ಕಾಣಿಸುವುದು ಅಮೆರಿಕದ ಉದ್ದೇಶಗಳಾಗಿದ್ದು, ಅವುಗಳು ಈಡೇರಿವೆ. ಯುಎಸ್ ಮಿಲಿಟರಿ ಮಿಷನ್ ಆಗಸ್ಟ್ ಅಂತ್ಯದವರೆಗೆ ಮಾತ್ರ ಮುಂದುವರೆಯಲಿದೆ ಎಂದಿದ್ದಾರೆ.
ಈ ಕುರಿತು ಪಜ್ವೋಕ್ ಆಫ್ಘನ್ ನ್ಯೂಸ್ ವರದಿ ಮಾಡಿದ್ದು, ಅಮೆರಿಕದ ಭದ್ರತಾ ತಂಡವು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಗೆ ಮಾಹಿತಿ ನೀಡಿದ ನಂತರ ಬೈಡನ್ ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದ್ದಾರೆ.