ಕರ್ನಾಟಕ

karnataka

ETV Bharat / international

ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಫ್ಘಾನ್​ ಮಹಿಳೆ - ಅಮೆರಿಕ ಮಿಲಿಟರಿಯ ಏರ್ ಮೊಬಿಲಿಟಿ ಕಮಾಂಡ್

ವಿಮಾನ ಹಾರಾಟದ ವೇಳೆ ಮಹಿಳೆಯೋರ್ವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಜರ್ಮನಿಯ ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಬಂದ ನಂತರ ಅಮೆರಿಕದ ವೈದ್ಯಕೀಯ ಸಿಬ್ಬಂದಿ ವಿಮಾನದಲ್ಲೇ ಹೆರಿಗೆ ಮಾಡಿಸಿದರು.

Afghan woman gives birth to 'baby girl' onboard US evacuation flight
ವಿಮಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಫ್ಘಾನ್​ ಮಹಿಳೆ

By

Published : Aug 23, 2021, 10:24 AM IST

ವಾಷಿಂಗ್ಟನ್ ಡಿಸಿ: ಕಾಬೂಲ್‌ನಿಂದ ಜರ್ಮನಿಯ ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಹಾರಿದ ವಿಮಾನದಲ್ಲಿ ಅಫ್ಘಾನಿಸ್ತಾನದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಮೆರಿಕ ಮಿಲಿಟರಿ ತಿಳಿಸಿದೆ.

ಈ ಕುರಿತು ಟ್ವೀಟ್‌ ‌ಮಾಡಿರುವ ಅಮೆರಿಕ ಮಿಲಿಟರಿಯ ಏರ್ ಮೊಬಿಲಿಟಿ ಕಮಾಂಡ್, ಶನಿವಾರ ವಿಮಾನ ಹಾರಾಟದ ವೇಳೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ವಿಮಾನದಲ್ಲಿ ವಾಯು ಒತ್ತಡವನ್ನು ಹೆಚ್ಚಿಸುವ ಉದ್ದೇಶದಿಂದ ವಿಮಾನ ಹಾರಾಟದ ಎತ್ತರವನ್ನು ಹೆಚ್ಚಿಸಲು ವಿಮಾನದ ಕಮಾಂಡರ್ ನಿರ್ಧರಿಸಿದ್ದರು. ವಾಯುನೆಲೆಗೆ ಬಂದ ನಂತರ ಅಮೆರಿಕದ ವೈದ್ಯಕೀಯ ಸಿಬ್ಬಂದಿ ವಿಮಾನದಲ್ಲೇ ಚಿಕಿತ್ಸೆ ಆರಂಭಿಸಿ ಹೆರಿಗೆ ಮಾಡಿಸಿದರು. ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಇಬ್ಬರ ಆರೋಗ್ಯ ಉತ್ತಮವಾಗಿದೆ. ತಾಯಿ-ಮಗುವನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.

ರಕ್ಷಣಾ ಇಲಾಖೆ ಟ್ವೀಟ್​

ಇನ್ನು ವಿಮಾನದಿಂದ ತಾಯಿ-ಮಗು ನಿರ್ಗಮಿಸಲು ಸಹಾಯ ಮಾಡಿದ ಯುಎಸ್ ಸಿಬ್ಬಂದಿಯ ಫೋಟೋಗಳನ್ನು ರಕ್ಷಣಾ ಇಲಾಖೆ ಹಂಚಿಕೊಂಡಿದೆ.

ತಾಲಿಬಾನ್‌ಗಳು ಕಾಬೂಲ್‌ ವಶಪಡಿಸಿಕೊಂಡ ನಂತರ ಅಲ್ಲಿನ ಜನರ ಸ್ಥಿತಿ ಶೋಚನೀಯವಾಗಿದ್ದು, ಅಫ್ಘಾನಿಸ್ತಾನ್​ ನರಕದಿಂದ ಅಮಾಯಕ ಜನರು ಬೇರೆ ದೇಶಕ್ಕೆ ತೆರಳಲು ಹರಸಾಹಸಪಡುತ್ತಿದ್ದಾರೆ.

ABOUT THE AUTHOR

...view details