ಅಲಾಸ್ಕಾ (ಅಮೆರಿಕ): ಅಲಾಸ್ಕಾದ ಪೆರಿವಿಲ್ಲೆಯ ಪೂರ್ವ-ಆಗ್ನೇಯಕ್ಕೆ 91 ಕಿ.ಮೀ ದೂರದಲ್ಲಿ 8.2 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಹಿನ್ನೆಲೆ, ಸುನಾಮಿ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಅಮೆರಿಕ ರಾಷ್ಟ್ರೀಯ ಸುನಾಮಿ ಕೇಂದ್ರ ಎಚ್ಚರಿಕೆ ನೀಡಿದೆ.
ಅಲಾಸ್ಕಾದಲ್ಲಿ 8.2 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ - alaska earthquake
ಅಮೆರಿಕದ ಅಲಾಸ್ಕಾದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ಇಲ್ಲಿನ ರಾಷ್ಟ್ರೀಯ ಸುನಾಮಿ ಕೇಂದ್ರ ಎಚ್ಚರಿಕೆಯಿಂದ ಇರುವಂತೆ ಹೇಳಿದೆ.
ಅಲಾಸ್ಕಾದಲ್ಲಿ 8.2 ತೀವ್ರತೆಯ ಭೂಕಂಪ
ಸ್ಥಳೀಯರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲು ಆಡಳಿತ ಕ್ರಮ ಕೈಗೊಂಡಿದೆ. ಈಗಾಗಲೇ ಸಂಭವಿಸಿರುವ ತೀವ್ರತೆಯ ಭೂಕಂಪದಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಾಶವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.