ಕರ್ನಾಟಕ

karnataka

ETV Bharat / international

ಪ್ರವಾಸಿಗರನ್ನು ಹೊತ್ತ ವಿಮಾನ ಪತನ: 7 ಜನ ದುರ್ಮರಣ - ಪೆರು ದೇಶದಲ್ಲಿ ಲಘು ವಿಮಾನ ಪತನ

ಪೆರು ದೇಶದ ನಾಜ್ಕಾ ಲೈನ್ಸ್ ಪ್ರವಾಸಿ ತಾಣ ವೀಕ್ಷಿಸಲು ಹೊರಟಿದ್ದ ಪ್ರವಾಸಿಗರ ವಿಮಾನ ಪತನಾಗಿದ್ದು,7 ಜನ ಮೃತಪಟ್ಟಿದ್ದಾರೆ.

ಪ್ರವಾಸಿಗರನ್ನು ಹೊತ್ತ ವಿಮಾನ ಪತನ
ಪ್ರವಾಸಿಗರನ್ನು ಹೊತ್ತ ವಿಮಾನ ಪತನ

By

Published : Feb 5, 2022, 4:34 AM IST

Updated : Feb 5, 2022, 8:33 AM IST

ಲಿಮಾ:ಪ್ರವಾಸಿಗರನ್ನು ಹೊತ್ತ ಲಘು ವಿಮಾನವೊಂದು ಪತನವಾಗಿದ್ದು, ಅದರಲ್ಲಿದ್ದ ಏಳು ಜನ ಮೃತಪಟ್ಟ ಘಟನೆ ಪೆರು ದೇಶದ ನಾಜ್ಕಾ ಲೈನ್ಸ್ ಪ್ರವಾಸಿ ತಾಣದ ಬಳಿ ಶುಕ್ರವಾರ ನಡೆದಿದೆ.

ವಿಶ್ವ ಪಾರಂಪರಿಕ ತಾಣ ನಾಜ್ಕಾ ರೇಖೆಗಳನ್ನು ನೋಡಲು ಹೊರಟಿದ್ದ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರೋ ಸ್ಯಾಂಟೋಸ್ ಎಂಬ ಟೂರ್ ಸಂಸ್ಥೆಯ ವಿಮಾನ ಇದಾಗಿದೆ. ಐವರು ಪ್ರವಾಸಿಗರು, ಓರ್ವ ಪೈಲಟ್ ಮತ್ತು ಸಹ ಪೈಲಟ್ ಸೇರಿ ಏಳು ಜನ ಮೃತಪಟ್ಟಿದ್ದಾರೆ. ಪ್ರವಾಸಿಗರ ಗುರುತು ಮತ್ತು ದೇಶ ಪತ್ತೆ ಹಚ್ಚುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

1500 ರಿಂದ 2000 ವರ್ಷಗಳ ಹಿಂದೆ ಪೆರುವಿನ ಮರಭೂಮಿಯ ಮೇಲೆ ಕಲ್ಪನಾ ರೇಖೆಗಳನ್ನು ಬಿಡಿಸಲಾಗಿದೆ. ಈ ತಾಣವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದೆ.

(ಇದನ್ನೂ ಓದಿ: ಕೋವಿಡ್​ನಿಂದ ಪತಿ ನಿಧನ : ತಬ್ಬಲಿ ಮಗು, ವಿಧವೆಗೆ ಹೊಸ ಬಾಳು ನೀಡಿದ ಮೃತ ಗಂಡನ ಸಹೋದರ!)

Last Updated : Feb 5, 2022, 8:33 AM IST

ABOUT THE AUTHOR

...view details