ಅಲಾಸ್ಕಾ( ಅಮೆರಿಕ) : ಅಮೆರಿಕದ ಪಶ್ಚಿಮ ಕರಾವಳಿಯಲ್ಲಿರುವ ಅಲಾಸ್ಕಾದಲ್ಲಿ ಭಾರಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4 ರಷ್ಟು ತೀವ್ರತೆ ದಾಖಲಾಗಿದ್ದು, ಆ ಪ್ರದೇಶದಲ್ಲಿ ಸುನಾಮಿ ಸಂಭವಿಸುವ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಕರಾವಳಿ ತೀರದ ನಿವಾಸಿಗಳಿಗೆ ಜಾಗೃತೆಯಿಂದಿರಲು ಸೂಚಿಸಲಾಗಿದೆ.
ಅಲಾಸ್ಕಾದ ಚಿಗ್ನಿಕ್ ಪ್ರದೇಶದಿಂದ 75 ಮೈಲಿ ದೂರದಲ್ಲಿ ಹಾಗೂ 8 ಮೈಲಿ ಆಳದಲ್ಲಿ ಭೂಕಂಪ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸಾಗರದಂಚಿನ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ಹವಾಮಾನ ಆಡಳಿತ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.