ವೆಸ್ಟ್‌ಲೇಕ್(ಅಮೆರಿಕ):ರಾಸಾಯನಿಕ ಘಟಕದಲ್ಲಿ ಸ್ಫೋಟ ಸಂಭವಿಸಿ ಸುಮಾರು 6 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕ ರಾಜ್ಯದ ಲುಸಿಯಾನಾದ ನೈರುತ್ಯ ಭಾಗದಲ್ಲಿ ನಡೆದಿದೆ ಎಂದು ವೆಸ್ಟ್‌ಲೇಕ್ ಕೆಮಿಕಲ್ ಸೌತ್ ಕಂಪನಿಯ ವಕ್ತಾರರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಓಷ್ನರ್ ಕ್ರಿಸ್ಟಸ್ ಸೇಂಟ್ ಪ್ಯಾಟ್ರಿಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಮೂವರನ್ನು ಲೇಕ್ ಚಾರ್ಲ್ಸ್ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ . ಘಟನಾ ಸ್ಥಳದಲ್ಲಿ ಒಬ್ಬರಿಗೆ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ದೊರಕಿದೆ.
ಶೇಖರಣಾ ಟ್ಯಾಂಕ್ ಖಾಲಿಯಾಗಿದ್ದ ಕಾರಣ, ಸ್ಫೋಟ ಸಂಭವಿಸಿದ ಸ್ವಲ್ಪ ಸಮಯದ ನಂತರ ಬೆಂಕಿಯನ್ನು ನಂದಿಸಲಾಯಿತು. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೋಟ್ ಮಗುಚಿದ ಪ್ರಕರಣದಲ್ಲಿ ಮುಂದುವರೆದ ಕಾರ್ಯಾಚರಣೆ: ಬೋಟ್ ಮುಳುಗಿ 39 ಮಂದಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯ ಮುಂದುವರೆಯುತ್ತಿದೆ. ಫ್ಲೊರಿಡಾದ ಅಂಟ್ಲಾಟಿಕ್ ಕರಾವಳಿಯಲ್ಲಿರುವ ಮಿಯಾಮಿ ನಗರದ ಬಳಿ ಘಟನೆ ನಡೆದಿದ್ದು, ಮಾನವ ಕಳ್ಳಸಾಗಣೆ ನಡೆಸುತ್ತಿತ್ತು ಎಂದು ಶಂಕಿಸಲಾದ ಬೋಟ್ ಚಂಡಮಾರುತದ ಕಾರಣಕ್ಕೆ ಶನಿವಾರ ರಾತ್ರಿ ಸಮುದ್ರದಲ್ಲಿ ಮುಳುಗಿತ್ತು ಎನ್ನಲಾಗಿದೆ.