ವಾಷಿಂಗ್ಟನ್( ಅಮೆರಿಕ):ರಷ್ಯಾ- ಉಕ್ರೇನ್ ಸಂಘರ್ಷದ ನಡುವೆ ನ್ಯಾಟೋ (NATO) ಮಿತ್ರರಾಷ್ಟ್ರಗಳನ್ನು ಬಲಪಡಿಸುವ ಪ್ರಯತ್ನದ ಫಲವಾಗಿ 500ಕ್ಕೂ ಹೆಚ್ಚು ಪಡೆಗಳನ್ನು ಅಮೆರಿಕ, ಯುರೋಪ್ಗೆ ರವಾನಿಸಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಫೋರ್ಟ್ ಬ್ರಾಗ್, ಉತ್ತರ ಕೆರೊಲಿನಾ, ಫೋರ್ಟ್ ಸ್ಟೀವರ್ಟ್, ಜಾರ್ಜಿಯಾ ಮತ್ತು ವಾಷಿಂಗ್ಟನ್‌ನ ಸ್ಪೋಕೇನ್‌ನಲ್ಲಿರುವ ಫೇರ್‌ಫೀಲ್ಡ್ ಏರ್ ಫೋರ್ಸ್ ಬೇಸ್‌ನಿಂದ ಯುಎಸ್ ಪಡೆಗಳು ಬರುತ್ತಿವೆ ಎಂದು ಪೆಂಟಗನ್ ವಕ್ತಾರ 'ಜಾನ್ ಕಿರ್ಬಿ' ಹೇಳಿದ್ದಾರೆ. ಈ ಹೆಚ್ಚುವರಿ ಸಿಬ್ಬಂದಿಯನ್ನು "ಉಕ್ರೇನ್‌ನಲ್ಲಿ ರಷ್ಯಾದ ಅಪ್ರಚೋದಿತ ಆಕ್ರಮಣವನ್ನು ತಡೆಗಟ್ಟಲು ಮತ್ತು ಐರೋಪ್ಯ ರಾಷ್ಟ್ರಗಳ ಮೇಲಿನ ಸಂಭಾವ್ಯ ದಾಳಿ ತಡೆಗಟ್ಟಲು, ಹಾಗೂ ನ್ಯಾಟೋ ಮೈತ್ರಿಕೂಟದ ರಕ್ಷಣಾ ಪಡೆಗಳಿಗೆ ಬೆಂಬಲ ನೀಡಲು ಅಮೆರಿಕ ಈ ಕ್ರಮ ಕೈಗೊಂಡಿದೆ ಎಂದು ಕಿರ್ಬಿ ಹೇಳಿದ್ದಾರೆ.
ಕೆಲವು ಪಡೆಗಳು ಜರ್ಮನಿ, ಪೋಲೆಂಡ್ ಹಾಗೂ ರೊಮೇನಿಯಾಗೆ ಹೋಗುತ್ತಿದ್ದರೆ, ಇನ್ನು ಕೆಲವು ಪಡೆಗಳು ಗ್ರೀಸ್‌ನಲ್ಲಿ ಬೀಡುಬಿಡಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಮೆರಿಕ ಪಡೆಗಳು ಉಕ್ರೇನ್‌ಗೆ ಪ್ರವೇಶಿಸುವುದಿಲ್ಲ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಬದಲಿಗೆ, ಒಕ್ಕೂಟದ ಪೂರ್ವ ಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ರಾಜ್ಯಗಳಿಗೆ ಯುಎಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಉಕ್ರೇನ್ ಯುದ್ಧದಲ್ಲಿ ರಷ್ಯಾದ ಮೇಜರ್ ಜನರಲ್ ಹತ್ಯೆ
ಪ್ರಸ್ತುತ ಬಿಕ್ಕಟ್ಟಿನ ಮೊದಲು, ಸರಿಸುಮಾರು 80,000 ಅಮೆರಿಕ ಪಡೆಗಳು ಯುರೋಪಿನಾದ್ಯಂತ ನೆಲೆಗೊಂಡಿದ್ದವು. ಫೆಬ್ರವರಿ 24 ರ ಆಕ್ರಮಣದ ಹಿಂದಿನ ವಾರಗಳಲ್ಲಿ, ಯುಎಸ್ ಪೂರ್ವ ಭಾಗದಲ್ಲಿ ಸೈನ್ಯವನ್ನು ನಿಯೋಜಿಸಲು ಪ್ರಾರಂಭಿಸಲಾಗಿದೆ. ಹೆಚ್ಚುವರಿ ಅಮೆರಿಕ ಪಡೆಗಳನ್ನು ಪೋಲೆಂಡ್, ರೊಮೇನಿಯಾ, ಲಾಟ್ವಿಯಾ ಮತ್ತು ಎಸ್ಟೋನಿಯಾದಲ್ಲಿ ನಿಯೋಜಿಸಲಾಗಿದೆ.