ಕರ್ನಾಟಕ

karnataka

ETV Bharat / international

'ನನ್ನ ಬೆಸ್ಟ್​ ಫ್ರೆಂಡ್​ ಪ್ರಧಾನಿ ಮೋದಿ.. ಆ ಒಂದು ಬಯಕೆ ಈಡೇರಿಸುತ್ತಿಲ್ಲ'.. ದೊಡ್ಡಣ್ಣ ಟ್ರಂಪ್ ಅಳಲು -

ನನ್ನ ನಾಯಕತ್ವದಲ್ಲಿ ಅಮೆರಿಕವನ್ನು ಇನ್ಮುಂದೆ ಮೋಸಗೊಳಿಸಲು ಸಾಧ್ಯವಿಲ್ಲ. ನಾವು ಕೆಟ್ಟದನ್ನು ಮಾಡುತ್ತಿರುವ ಮೂರ್ಖ ರಾಷ್ಟ್ರವಲ್ಲ ಎಂದಿದ್ದಾರೆ ಡೋನಾಲ್ಡ್‌ ಟ್ರಂಪ್.​

ಸಂಗ್ರಹ ಚಿತ್ರ

By

Published : Jun 11, 2019, 8:14 AM IST

ವಾಷಿಂಗ್ಟನ್​:ಅಮೆರಿಕಾದಿಂದ ಆಮದು ಆಗುತ್ತಿರುವ ಮೋಟಾರ್​ ಸೈಕಲ್​ಗಳ ಮೇಲಿನ ಸುಂಕವನ್ನು ಭಾರತ ಶೇ. 100ರಿಂದ ಶೇ. 50ಕ್ಕೆ ತಗ್ಗಿಸಿದ್ದರೂ ಇದು ಹೆಚ್ಚಿನದ್ದು ಹಾಗೂ ಸ್ವೀಕಾರಾರ್ಹವಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ನನ್ನ ನಾಯಕತ್ವದಲ್ಲಿ ಅಮೆರಿಕವನ್ನು ಇನ್ಮುಂದೆ ಮೋಸಗೊಳಿಸಲು ಸಾಧ್ಯವಿಲ್ಲ. ನಾವು ಕೆಟ್ಟದನ್ನು ಮಾಡುತ್ತಿರುವ ಮೂರ್ಖ ರಾಷ್ಟ್ರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನೀವು ಭಾರತದತ್ತ ಒಮ್ಮೆ ನೋಡಿ, ನನ್ನ ಉತ್ತಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಆಮದು ಮಾಡಿಕೊಂಡ ಮೋಟಾರ್ ಸೈಕಲ್​​ಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುತ್ತಿದ್ದಾರೆ. ಆದರೆ, ನಾವು ಅವರಿಗೆ ಯಾವುದೇ ತೆರಿಗೆ ಭಾರ ಹೇರುತ್ತಿಲ್ಲ ಎಂದಿದ್ದಾರೆ. ಹಾರ್ಲೆ ಡೇವಿಡ್ಸನ್​ ಮೋಟರ್​​ ಸೈಕಲ್​ಗಳ ಮೇಲಿನ ಸುಂಕ ಉಲ್ಲೇಖಿಸಿ, ಈ ವಿಷಯ ನನಗೆ ಹೃದಯಕ್ಕೆ ತೀರಾ ಹತ್ತಿರವಾದದ್ದು. ಭಾರತದ ಇದರ ಮೇಲಿನ ಸುಂಕ ಶೂನ್ಯಕ್ಕೆ ತಗ್ಗಿಸಬೇಕಿದೆ ಎಂಬುದು ನನ್ನ ಬಯಕೆ ಎಂದು ಹೇಳಿದ್ದಾರೆ.

ನಾನು ಒಂದು ಫೋನ್​ ಕಾಲ್ ಮಾಡಿದ್ದಕ್ಕೆ ಅವರು (ಮೋದಿ) ಶೇ. 50ರಷ್ಟು ಸುಂಕ ಇಳಿಸಿದ್ದರು. ಈಗಲೂ ಇದು ಸ್ವೀಕಾರಾರ್ಹವಲ್ಲ. ಶೇ 50ರಷ್ಟು ಸುಂಕ ಕಡಿತ ಏನಕ್ಕೂ ಸಾಲುವುದಿಲ್ಲ. ಉಭಯ ರಾಷ್ಟ್ರಗಳು ಸುಂಕದ ಬಗ್ಗೆ ಇರುವ ವ್ಯಾಜ್ಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಮೋದಿಗೆ ಆಹ್ವಾನ ನೀಡಿದ್ದಾರೆ ಡೋನಾಲ್ಡ್‌ ಟ್ರಂಪ್‌.

For All Latest Updates

TAGGED:

ABOUT THE AUTHOR

...view details