ವಾಷಿಂಗ್ಟನ್:ಅಮೆರಿಕದ ಕೆಂಟುಕಿಯಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ 50 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ಏಕಾಏಕಿಯಾಗಿ ಚಂಡಮಾರುತ ಅಪ್ಪಳಿಸಿರುವ ಪರಿಣಾಮ ಕೆಂಟುಕಿಯಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ಅನೇಕರು ತೊಂದರೆಗೊಳಗಾಗಿದ್ದಾರೆ ಎಂದು ಅಲ್ಲಿನ ಗವರ್ನರ್ ಆ್ಯಂಡಿ ಬೆಶಿಯರ್ ಮಾಹಿತಿ ನೀಡಿದ್ದಾರೆ. ಚಂಡಮಾರುತ ಬೀಸಿರುವ ಕಾರಣ ಅಮೆಜಾನ್ ವೇರ್ಹೌಸ್ನಲ್ಲಿ 100 ಕಾರ್ಮಿಕರು ಸಿಲುಕಿಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.