ಲಾಸ್ ಏಂಜಲೀಸ್ (ಅಮೆರಿಕ):ತಾನು ಕೇಳಿದ ದುಬಾರಿ ಲ್ಯಾಂಬೋರ್ಗಿನಿ ಕಾರು ಕೊಡಿಸಲಿಲ್ಲ ಎಂಬ ಆಕ್ರೋಶದಲ್ಲೇ ತಾಯಿಯ ದುಬಾರಿ ಕಾರು ತೆಗೆದುಕೊಂಡು ಮನೆ ಬಿಟ್ಟಿರುವ ಘಟನೆ ಲಾಸ್ ಏಂಜಲೀಸ್ನಲ್ಲಿ ನಡೆದಿದೆ.
ಲ್ಯಾಂಬೋರ್ಗಿನಿ ಕೊಡಿಸದ ಪೋಷಕರು... ತಾಯಿ ಕಾರು ಡ್ರೈವ್ ಮಾಡಿಕೊಂಡು ಬಂದ 5 ವರ್ಷದ ಬಾಲಕ! - ದುಬಾರಿ ಲ್ಯಾಂಬೋರ್ಗಿನಿ
ಇಷ್ಟಪಟ್ಟಿರುವ ಕಾರು ಪೋಷಕರು ಕೊಡಿಸಲಿಲ್ಲ ಎಂಬ ಸಿಟ್ಟಿನಿಂದ ಮನೆಯಲ್ಲಿದ್ದ ಲ್ಯಾಂಬೋರ್ಗಿನಿ ಕಾರು ಡ್ರೈವ್ ಮಾಡಿಕೊಂಡು ಐದು ವರ್ಷದ ಮಗು ಹೊರಗಡೆ ಹೋಗಿರುವ ಘಟನೆ ನಡೆದಿದೆ.
ರಸ್ತೆಯಲ್ಲಿ ಅಡ್ಡಾದಿಡ್ಡಿ ಹೋಗುತ್ತಿದ್ದ ಲ್ಯಾಂಬೋರ್ಗಿನಿ ಕಾರು ನಿಲ್ಲಿಸಿದ ಹೈವೇ ಪೆಟ್ರೋಲ್ ಪೊಲೀಸರಿಗೆ ಶಾಕ್ ಆಗಿದೆ. ಈ ವೇಳೆ ಆತನ ಪ್ರಶ್ನೆ ಮಾಡಿದಾಗ ತಾನೇ ಕಾರ್ ಡ್ರೈವ್ ಮಾಡಿಕೊಂಡು ಬಂದಿದ್ದಾಗಿ ಹೇಳಿದ್ದಾನೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಿಕ್ ಮಾರ್ಗನ್ ಲ್ಯಾಂಬೋರ್ಗಿನಿ ಕಾರು ಕೊಡಿಸುವಂತೆ ತಾಯಿ ಜತೆ ಜಗಳವಾಡಿದ್ದಾನೆ. ಈ ವೇಳೆ ಕ್ಯಾಲಿಫೋರ್ನಿಯಾಗೆ ತೆರಳಿ ಕಾರು ಖರೀದಿ ಮಾಡಲು ಮುಂದಾಗಿದ್ದನು ಎಂದು ತಿಳಿದು ಬಂದಿದೆ. ಈ ವೇಳೆ, ಆತನ ಬಳಿ ಮೂರು ಡಾಲರ್ ಹಣ ಇತ್ತು ಎಂದು ತಿಳಿದು ಬಂದಿದೆ. ಬಾಲಕ ಮನೆ ಬಿಟ್ಟು ಕೇವಲ 3-4 ಕಿಲೋ ಮೀಟರ್ ದೂರ ಹೋಗಿದ್ದನು ಎಂದು ಪೆಟ್ರೋಲ್ ಪೊಲೀಸರು ತಿಳಿಸಿದ್ದಾರೆ.